04 July 2025 | Join group

ಸುರತ್ಕಲ್ ನಲ್ಲಿ ಎರಡು ಬಸ್ಸುಗಳ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ

  • 02 Jul 2025 11:41:27 PM

ಮಂಗಳೂರು: ಸುರತ್ಕಲ್ ನಲ್ಲಿ ಎರಡು ಖಾಸಗಿ ಬಸ್ಸುಗಳು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಚಾಲಕರು ಮತ್ತು 14 ಶಾಲಾ ಮಕ್ಕಳು ಸೇರಿದಂತೆ 25 ಜನರು ಗಾಯಗೊಂಡಿದ್ದಾರೆ.

 

ಸುರತ್ಕಲ್ ನಿಂದ ಚೆಲ್ಯಾರು ಕಡೆ ಒಂದು ಬಸು ಚಲಿಸುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಬಸ್ಸು ನೇರವಾಗಿ ಡಿಕ್ಕಿ ಹೊಡೆದ ಕಾರಣ ಈ ಅವಘಡ ಸಂಭವಿಸಿದೆ. ಬಸ್ಸು ಚಾಲಕನ ನಿರ್ಲಕ್ಷದಿಂದ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಡಿಕ್ಕಿ ಮೊಬೈಲ್ ವಿಡಿಯೋದಲ್ಲೂ ಸೆರೆಯಾಗಿದೆ.

 

ಒಟ್ಟು 41 ಜನ ಗಾಯಗೊಂಡಿದ್ದು, 4 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 14 ಶಾಲಾ ಮಕ್ಕಳು ಕೂಡ ಇದ್ದಾರೆ.

 

ಗಾಯಗೊಂಡ ಎಲ್ಲರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.