04 July 2025 | Join group

ದ. ಕನ್ನಡದಲ್ಲೂ ಹೆಚ್ಚುತ್ತಿರುವ ಹೃದಯಾಘಾತ ಸಾವುಗಳು: ಬೆಚ್ಚಿ ಬೀಳಿಸಿದ 6 ತಿಂಗಳ ವರದಿ

  • 03 Jul 2025 04:45:04 PM

ಮಂಗಳೂರು: ಕಳೆದ ಆರು ತಿಂಗಳಲ್ಲಿ ದಕ್ಷಿಣ ಕನ್ನಡಲ್ಲಿ 85 ಜನರು ಹೃದಯಾಘಾತದಿಂದ ಸಾವನಪ್ಪಿದ ವರದಿ ಬಹಿರಂಗವಾಗಿದೆ. ಜಿಲ್ಲಾ ಅರೋಗ್ಯ ಅಧಿಕಾರಿಯಾಗಿರುವ ಡಾ. ಎಚ್. ಆರ್. ತಿಮ್ಮಯ್ಯ ಈ ಬಗ್ಗೆ ಮಾಹಿತಿ ತಿಳಿಸಿದ್ದು, ಈ ವರ್ಷ ಜನವರಿಯಿಂದ ಒಟ್ಟು 380 ಹೃದಯಾಘಾತ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು ಅದರಲ್ಲಿ 54 ಪುರುಷರು ಮತ್ತು 31 ಮಹಿಳೆಯರು ಸೇರಿದಂತೆ 85 ಜನರು ಪ್ರಾಣ ಕಳೆದುಕೊಂಡಿದ್ದಾರೆ.

 

COVID-19 ಸಾಂಕ್ರಾಮಿಕ ರೋಗದ ನಂತರ ಇದೀಗ ದೇಶದಾದ್ಯಂತ ಕೇಳಿ ಬರುತ್ತಿರುವ ಬಹು ದೊಡ್ಡ ಅರೋಗ್ಯ ಸಮಸ್ಯೆ ಎಂದರೆ ಅದು ಹೃದಯಾಘಾತ. ಅದರಲ್ಲೂ ಕಿರಿಯ ವ್ಯಕ್ತಿಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ಬಹಳ ಆತಂಕವನ್ನು ಸೃಷ್ಟಿಸಿದೆ.

 

ಕಳೆದ ಒಂದು ತಿಂಗಳಿನಿಂದ ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿದಿನ ಒಂದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೇಶಾದ್ಯದ್ಯಂತ ಅನೇಕ ಸೆಲೆಬ್ರಿಟಿಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ಕಿರಿಯ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನು ಕಳೆದುಕೊಂಡ ಪ್ರಕರಣಗಳು ಇವೆ.

 

ಶಿಸ್ತುಬದ್ಧ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಪರಿಣಾಮಕಾರಿ ಒತ್ತಡ ನಿರ್ವಹಣೆ ಹೃದಯಾಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಜಿಲ್ಲಾ ಅರೋಗ್ಯ ಅಧಿಕಾರಿ ಸಲಹೆ ನೀಡಿದ್ದಾರೆ.