ಮಂಗಳೂರು: ಪುತ್ತೂರಿನಲ್ಲಿ ಇತೀಚೆಗೆ ನಡೆದ ಮದುವೆಯಾಗುವೆನೆಂದು ನಂಬಿಸಿ ವಂಚಿಸಿದ ಪ್ರಕರಣಕ್ಕೆ ಬಿಜೆಪಿ ಸ್ಪಷ್ಟನೆ ನೀಡಿದೆ. ಈ ಪ್ರಕರಣದ ಬಗ್ಗೆ ಬಿಜೆಪಿ ಸುದ್ದಿಗೋಷ್ಠಿ ನಡೆಸಿ ತಮ್ಮ ನಿಲುವನ್ನು ವ್ಯಕ್ತಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ 'ನಾವು ಸಂತ್ರಸ್ತೆ ಮಹಿಳೆ ಮತ್ತು ಅವರ ಮಗಳ ಜೊತೆ ಯಾವಾಗಲೂ ಇದ್ದೇವೆ' ಎಂದಿದ್ದಾರೆ.
'ಶಾಸಕ ಅಶೋಕ್ ರೈ ಈ ಪ್ರಕರಣವನ್ನು ಬಗೆಹರಿಸುತ್ತಾರೆ ಎಂದು ಮಾಧ್ಯಮದ ಮೂಲಕ ಹೇಳಿದ ಪರಿಣಾಮ ನಾವು ಇದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಆದರೆ ಇಂದು ಸ್ಪಷ್ಟ ಪಡಿಸುತ್ತಿದ್ದೇವೆ ನಾವು ಸಂತ್ರಸ್ತೆಗೆ ನ್ಯಾಯ ದೊರೆಕಿಸುವಲ್ಲಿ ಅವರ ಜೊತೆ ಇದ್ದೇವೆ' ಎಂದು ನುಡಿದಿದ್ದಾರೆ.
ಬಿಜೆಪಿ ನಗರ ಸಭೆ ಸದಸ್ಯರ ಮಗನ ಈ ಪ್ರಕರಣಕ್ಕೆ ಬಿಜೆಪಿ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ಪ್ರಶ್ನೆಗೆ ಇಂದು ತೆರೆಬಿದ್ದಿದೆ. ಇದೀಗ ಆರೋಪಿ ಶ್ರೀಕೃಷ್ಣ. ಜೆ ಇನ್ನೂ ತಲೆಮಾರಿಸಿಕೊಂಡಿದ್ದು ಪೊಲೀಸರು ಹುಡುಕಾಡುತಿದ್ದಾರೆ.