ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ರೇಬೀಸ್ ನಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಮರಣಪಟ್ಟಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬೀದಿ ನಾಯಿಯನ್ನು ರಕ್ಷಿಸಲು ಪ್ರಯತ್ನಿಸಿ ಅದೇ ನಾಯಿ ಕಚ್ಚಿದ ಸುಮಾರು ಒಂದು ತಿಂಗಳ ನಂತರ ಬ್ರಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ.
ಬ್ರಜೇಶ್ ರವರ ಕೊನೆಗಳಿಗೆಯ ನರಳಾಡುತಿರುವ ವಿಡಿಯೋ ವೈರಲ್ ಆಗಿದ್ದು, ಹೃದಯ ಚುಚ್ಚುವಂತಿದೆ. ಖುರ್ಜಾ ನಗರ ಕೊತ್ವಾಲಿಯ ಫರಾನಾ ಗ್ರಾಮದ ನಿವಾಸಿ 24 ವರ್ಷದ ಕ್ರೀಡಾಪಟು ಆರಂಭದಲ್ಲಿ ನಾಯಿಮರಿಯನ್ನು ಉಳಿಸುವ ಮೂಲಕ ಕರುಣೆ ತೋರಿಸಿದ್ದರು.
ಆದರೆ ನಾಯಿ ಕಚ್ಚಿದ ನಂತರ ಬೇಕಾದ ವೈದ್ಯಕೀಯ ಚಿಕಿತ್ಸೆ ಪಡೆಯದೇ ಇದ್ದುದರಿಂದ ಅವರ ಆರೋಗ್ಯ ಹದಗೆಟ್ಟಂತೆ, ರೇಬೀಸ್ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಅಂತಿಮವಾಗಿ ಅವರ ಅಕಾಲಿಕ ಸಾವಿಗೆ ಕಾರಣವಾಯಿತು.
ಬ್ರಿಜೇಶ್ ಸಾವು ಸಾರ್ವಜನಿಕರಿಗೂ ಬಲವಾದ ಸಂದೇಶವನ್ನು ರವಾನಿಸಿದೆ. ಇದರಲ್ಲಿ ಒಂದು ಬಲವಾದ ಸಂದೇಶವಿದೆ, ಯಾವುದೇ ನಾಯಿ ಅಥವಾ ಪ್ರಾಣಿಗಳು ಕಚ್ಚಿದರೆ, ಪ್ರತಿಯೊಬ್ಬರೂ ಅಗತ್ಯ ಔಷಧವನ್ನು ತಪ್ಪದೆ ತೆಗೆದುಕೊಳ್ಳಬೇಕು. ಈ ರೀತಿಯ ಘಟನೆಗಳಿಗೆ ಮುನ್ನೆಚ್ಚರಿಕೆ ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ ಮತ್ತು ನಾವು ಅವುಗಳನ್ನು ತಪ್ಪಿಸಬಾರದು ಎಂದು ವೈದ್ಯಕೀಯ ತಜ್ಞರು ಒತ್ತಿ ಹೇಳುತ್ತಾರೆ.