04 August 2025 | Join group

ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಸೇನಾ ವೈದ್ಯರು ಮತ್ತು ರೈಲ್ವೆ ಸಿಬ್ಬಂದಿ ಕಾರ್ಯಕ್ಕೆ ದೊಡ್ಡ ಸಲಾಂ

  • 07 Jul 2025 08:24:39 PM

ಉತ್ತರ ಪ್ರದೇಶ: ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡುವ ಮೂಲಕ ಸೇನಾ ವೈದ್ಯ ಮೇಜರ್ ರೋಹಿತ್ ಮಾನವೀಯತೆ ಮೆರೆದರು. 

 

ಪನ್ವೇಲ್ ನಿಂದ ಗೋರಖ್‌ಪುರಕ್ಕೆ ಹೋಗುತ್ತಿದ್ದ ಗರ್ಭಿಣಿ ಯೊಬ್ಬರಿಗೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿತು. 

 

ಅದೇ ಮಾರ್ಗವಾಗಿ ಹೈದರಾಬಾದ್ ಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದ ರೋಹಿತ್ ಅವರಿಗೆ ವಿಷಯ ತಿಳಿದು ಟಿಕೆಟ್ ಬುಕಿಂಗ್ ಕೌಂಟರ್ ನ ಲಿಲ್ಲಿ ಕುಶ್ವಾ ಮತ್ತು ತಂಡದ ಸಹಾಯದಿಂದ ಆಕೆಗೆ ಸುರಕ್ಷಿತ ಹೆರಿಗೆ ಮಾಡಿಸಿದರು. 

 

ಸೇನಾ ವೈದ್ಯರ ಮತ್ತು ರೈಲ್ವೆ ಸಿಬ್ಬಂದಿಗಳ ತುರ್ತು ನೆರವಿನ ಕಾರ್ಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.