ಭಾರತದ ಗೃಹ ಸಚಿವ ಹಾಗೂ ಭಾಜಪದ ಪ್ರಮುಖ ನಾಯಕ ಅಮಿತ್ ಶಾ ಅವರು ತಮ್ಮ ರಾಜಕೀಯ ನಿವೃತ್ತಿಯ ನಂತರದ ಆಸಕ್ತಿಗಳ ಕುರಿತು ಗಮನ ಸೆಳೆಯುವಂತಹ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ ಮತ್ತು ಇತರ ರಾಜ್ಯಗಳ ಸರ್ಕಾರಿ ಮಹಿಳಾ ನೌಕರರೊಂದಿಗೆ ನಡೆದ 'ಸರಕಾರ್ ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, "ನಾನು ರಾಜಕೀಯ ನಿವೃತ್ತಿ ಪಡೆದ ನಂತರ ನನ್ನ ಜೀವನವನ್ನು ವೇದಗಳು, ಉಪನಿಷತ್ತುಗಳು ಹಾಗೂ ನೈಸರ್ಗಿಕ ಕೃಷಿ ಅಧ್ಯಯನಕ್ಕೆ ಮೀಸಲಿಡಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ತಮ್ಮ ಪುಸ್ತಕ ಪ್ರೀತಿಯನ್ನೂ ಈ ಸಂದರ್ಭದಲ್ಲಿ ಹಂಚಿಕೊಂಡು, "ನನ್ನ ಬಳಿ ಸುಮಾರು 8000ಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ ಅವನ್ನು ಓದಲು ನನಗೆ ಈಗ ಸಮಯವಿಲ್ಲ. ನಿವೃತ್ತಿ ನಂತರ ಈ ಅಧ್ಯಯನಕ್ಕೆ ಸಂಪೂರ್ಣವಾಗಿ ಸಮಯ ನೀಡಲು ಇಚ್ಛಿಸುತ್ತೇನೆ" ಎಂದು ಉಲ್ಲೇಖಿಸಿದ್ದಾರೆ.
370ನೇ ಕಲಂ ರದ್ದತಿ (ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಅಂತ್ಯ), ಸಿಎಎ – ನಾಗರಿಕತಾ ತಿದ್ದುಪಡಿ ಕಾಯ್ದೆ ಮತ್ತು ಅಂತರ ರಾಜ್ಯ ಗಡಿಭದ್ರತಾ ವ್ಯವಸ್ಥೆ ಸುಧಾ