ಬಂಟ್ವಾಳ: 2007ರ ಅಪಹರಣ ಹಾಗೂ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೆ ಏಳು ತಿಂಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಹಿದಾಯತ್ ಅಲಿಯಾಸ್ ಅಬ್ದುಲ್ಲಾ ಎಂಬಾತನನ್ನು ಬಂಟ್ವಾಳ ಪೊಲೀಸರು ಮಂಜೇಶ್ವರದಲ್ಲಿ ಬಂಧಿಸಿದ್ದಾರೆ.
ಬಂಟ್ವಾಳದ ಮಂಚಿಯ ನಿವಾಸಿಯಾದ ಆತನು, ಐಪಿಸಿ ಸೆಕ್ಷನ್ 366, 420, 120ಬಿ, 368 ಮತ್ತು 149 ಅಡಿಯಲ್ಲಿ ಆರೋಪಿಗಾಗಿದ್ದ. ಜಾಮೀನಿನ ಬಳಿಕ ವಿಚಾರಣೆಗೆ ಗೈರಾಗಿದ್ದ ಕಾರಣ, ಇದೀಗ BNS ಸೆಕ್ಷನ್ 269 ಅಡಿಯಲ್ಲಿ ಹೊಸ ಪ್ರಕರಣವನ್ನೂ ಪೊಲೀಸರು ದಾಖಲಿಸಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದು ಬಂಟ್ವಾಳ ಪೊಲೀಸರ ಯಶಸ್ವಿ ಕಾರ್ಯಾಚರಣೆಯಾಗಿದೆ.