12 July 2025 | Join group

ರೈಲಿನಲ್ಲಿ ರೀಲ್ಸ್ ಹುಚ್ಚಾಟ: ವಿಡಿಯೋ ಮಾಡುತ್ತಿದ್ದ ಯುವತಿಗೆ ಕೆನ್ನೆಗೆ ನಾಲ್ಕು ಬಾರಿಸಿದ ಆಂಟಿ - ವಿಡಿಯೋ ವೈರಲ್

  • 11 Jul 2025 02:07:43 AM

ರೀಲ್ಸ್ ಬಗ್ಗೆ ಆಸಕ್ತಿ ಇಂದಿನ ಯುವಜನತೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಈ ಹುಚ್ಚು ಕೆಲವೊಮ್ಮೆ ತಮ್ಮ ಹಾಗೂ ಇತರರ ಜೀವಕ್ಕೂ ಅಪಾಯವಾಗುವಂತಾಗುತ್ತಿದೆ. ಇಂತಹದ್ದೇ ಒಂದು ಘಟನೆ ಇತ್ತೀಚೆಗಷ್ಟೆ ರೈಲಿನಲ್ಲಿ ನಡೆದಿದೆ, ಇದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ.

 

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಯುವತಿಯೊಬ್ಬಳು ವೇಗವಾಗಿ ಸಾಗುತ್ತಿರುವ ರೈಲಿನ ಬಾಗಿಲ ಬಳಿ ನಿಂತು ಅಪಾಯ ಮರೆತು ರೀಲ್ಸ್ ಮಾಡುತ್ತಿದ್ದಳು. ಈ ವೇಳೆ, ಅಲ್ಲೇ ಇದ್ದ ಮಧ್ಯವಯಸ್ಸಿನ ಮಹಿಳೆಯೊಬ್ಬರು (ಆಂಟಿ) ಆಕೆಯ ಆತಂಕಕಾರಿ ನಡೆಗೆ ವಿರೋಧ ವ್ಯಕ್ತಪಡಿಸಿ, ಆಕೆಯನ್ನು ಎಳೆದು ಕೆನ್ನೆಗೆ ನಾಲ್ಕು ತಪ್ಪರೆ ಹಾಕಿದ್ದಾರೆ.

 

ಈ ವಿಡಿಯೋವನ್ನು ನೋಡಿದ ನೆಟಿಜನ್‌ಗಳು ಆಂಟಿಯ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. “ಇಂತಹ ಧೈರ್ಯವಂತ ಮಹಿಳೆಯರು ಇನ್ನು ಹೆಚ್ಚು ಬೇಕು”, “ಗ್ರೇಟ್ ಆಂಟಿ!”, “ಈ ರೀತಿಯ ಎಚ್ಚರಿಕೆಯ ಕ್ರಮಗಳೇ ಯುವಪೀಳಿಗೆಗೆ ಬುದ್ಧಿವಾದ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

 

ರೀಲ್ಸ್ ಮಾಡುವುದು ತಪ್ಪಲ್ಲ, ಆದರೆ ಸುರಕ್ಷತೆಗೆ ತೊಂದರೆಯಾಗುವ ರೀತಿಯ ಚಿತ್ರಣಗಳು ಜೀವಕ್ಕೂ ಅಪಾಯ ಉಂಟುಮಾಡಬಹುದು ಎಂಬುದನ್ನು ಈ ವಿಡಿಯೋ ಮತ್ತೆ ನೆನಪಿಸುತ್ತಿದೆ.