12 July 2025 | Join group

ಎಂ ಆರ್ ಪಿ ಎಲ್(MRPL) ಘಟಕದಲ್ಲಿ ತೈಲ ಸೋರಿಕೆ: 2 ಮಂದಿ ಸಾವು, ಒಬ್ಬ ಅಸ್ವಸ್ಥ

  • 12 Jul 2025 01:43:19 PM

ಮಂಗಳೂರು: ಎಂ ಆರ್ ಪಿ ಎಲ್ ಘಟಕದಲ್ಲಿ ಹೈಡ್ರೋಜನ್ ಸಲ್ಫೈಡ್ ಸೋರಿಕೆಯಾದ ಕಾರಣ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬ ಕಾರ್ಮಿಕ ಅಸ್ವಸ್ಥಗೊಂಡಿರುವ ಘಟನೆ ಜುಲೈ 12 ರ ಶನಿವಾರ ನಡೆದಿದೆ.

 

ಈ ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬರು ಕನ್ನಡಿಗರಾಗಿದ್ದು ಮತ್ತಿಬ್ಬರು ಹೊರರಾಜ್ಯಕ್ಕೆ ಸೇರಿದವರೆಂದು ತಿಳಿದುಬಂದಿದೆ. ಎಲ್ಲಾ ಅಸ್ವಸ್ಥಗೊಂಡ ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರಾದರು ದಾರಿ ಮಧ್ಯೆ ಇಬ್ಬರು ಕೊನೆಯುಸಿರೆಳೆದ್ದಿದ್ದರೆ.

 

ಎಂ ಆರ್ ಪಿ ಎಲ್ ನ ತ್ಯಾಜ್ಯ ತೈಲ ಸಂಗ್ರಹಣಾ ಘಟಕದಲ್ಲಿ ಲೆವೆಲ್ ಬದಲಾವಣೆ ಪರಿಶೀಲನೆಗೆ ಒಬ್ಬರ ಕಾರ್ಮಿಕ ತೆರಳಿದ್ದು, ಕೆಲ ಸಮಯದವರೆಗೆ ಮರಳಿ ಬರದೇ ಇದ್ದುದ್ದರಿಂದ ಮತ್ತಿಬ್ಬರು ತೆರಳಿದ್ದರು. ಆದರೆ ಘಟಕದಲ್ಲಿ ಹೈಡ್ರೋಜನ್ ಸಲ್ಫೈಡ್ ಸೋರಿಕೆಯಾಗಿದ್ದ ಕಾರಣ ಮೂವರು ಅಶ್ವಸ್ಥಗೊಂಡರು ಎನ್ನಲಾಗಿದೆ.