ಮಂಗಳೂರು: ಇತ್ತೀಚೆಗೆ ತೆಂಗಿನಕಾಯಿಯ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದೀಗ ಕಳ್ಳರು ಇದರತ್ತ ಗಮನಹರಿಸಿದ್ದಾರೆ. ಪರಿಣಾಮವಾಗಿ ಹಲವು ತೆಂಗಿನಕಾಯಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಇರುವ ಕಾಸರಗೋಡು ಹಾಗೂ ಸುತ್ತಮುತ್ತಲ ಪ್ರದೇಶಗಳಾದ ಮಂಜೇಶ್ವರ, ಕುಂಬ್ಳೆ, ಬದಿಯಡ್ಕ ಮತ್ತು ಬೇಕಲ್ ಠಾಣಾ ವ್ಯಾಪ್ತಿಗಳಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗಿವೆ.
ಸಾವಿರಾರು ರೂ. ಮೌಲ್ಯದ ತೆಂಗಿನಕಾಯಿ ಹಾಗೂ ಗೆರೆಟೆಗಳು ಕಳವಾಗಿರುವುದಾಗಿ ರೈತರು ದೂರು ನೀಡಿದ್ದಾರೆ.
ಇದರಿಂದಾಗಿ ತೆಂಗಿನಕಾಯಿ ಬೆಳೆಗಾರರಲ್ಲಿ ಆತಂಕವ್ಯಾಪಿಸಿದೆ. ಕಳ್ಳತನವನ್ನು ತಡೆಯಲು ಪೊಲೀಸರು ಹೆಚ್ಚಿನ ಪೇಟ್ರೋಲಿಂಗ್ ಮತ್ತು ಸಿಸಿಟಿವಿ ನಿಗಾವಹಿಸುವತ್ತ ಗಮನ ಹರಿಸಿದ್ದಾರೆ.