ಮಂಗಳೂರು: MRPL ನಲ್ಲಿ ವಿಷಾನಿಲ ಸೋರಿಕೆಯಿಂದ ಸಾವನ್ನಪ್ಪಿದ ಕಾರ್ಮಿಕ ದೀಪ್ ಚಂದ್ರ ಭಾರ್ತೀಯ ಅವರ ಮೃತದೇಹವನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ತವರೂರಿಗೆ ಕೊಂಡೊಯ್ಯಲು ತೆರಳಿದ್ದ ಐವರು ಸಹೋದ್ಯೋಗಿಗಳನ್ನು ಗ್ರಾಮಸ್ಥರು ದಿಗ್ಬಂಧಿಸಿದ್ದಾರೆ.
ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್, ಪಂಕಜ್ ಎಂಬ ಐವರು ದೇಹವೊಡನೆ ಊರಿಗೆ ತಲುಪುತ್ತಿದ್ದಂತೆ, ಸ್ಥಳೀಯರು MRPL ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮ್ಯಾನೇಜ್ಮೆಂಟ್ ಬರೋವರೆಗೂ ಯಾರನ್ನೂ ಮಂಗಳೂರಿಗೆ ಕಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದೇ ವೇಳೆ MRPL ಫ್ಯಾಕ್ಟರಿ ಮ್ಯಾನೇಜರ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದ್ರೂ ಯಾವುದೇ ಕ್ರಮವಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಐವರು ವಿಡಿಯೋ ಮೂಲಕ MRPL ಗೆ ಮನವಿ ಸಲ್ಲಿಸಿ “ಬಡ ಕಾರ್ಮಿಕರ ಪ್ರಾಣಕ್ಕೆ ಬೆಲೆ ಇಲ್ಲವೆ?” ಎಂಬ ಪ್ರಶ್ನೆ ಎತ್ತಿದ್ದಾರೆ.