ತಿರುವನಂತಪುರಂ: ಕೇರಳದಲ್ಲಿ ನೀಫಾ ವೈರಸ್ ಮತ್ತೊಮ್ಮೆ ಹರಡಿದೆ. ಈ ವೈರಸ್ ಗೆ 2 ಜನ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಕೇರಳದ ಆರು ಜಿಲ್ಲೆಗಳಾದ ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್, ಕಣ್ಣೂರು, ವಯನಾಡ್ ಮತ್ತು ತ್ರಿಶೂರ್ ಜಿಲ್ಲೆಗಳ ಅರೋಗ್ಯ ಕೇಂದ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಒಂದು ವಾರದ ಹಿಂದೆಯಷ್ಟೇ ನೀಫಾ ವೈರಸ್ ಗೆ 58 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಪಾಲಕ್ಕಾಡ್ ಕುಮಾರಂಪುತ್ತೂರು ನಿವಾಸಿ ನೀಫಾ ವೈರಸ್ ಸೋಂಕಿನಿಂದ ಬಲಿಯಾಗಿದ್ದಾರೆ. ಈ ಕಾರಣದಿಂದಾಗಿ ಮಲಾಪುರಂ ಮತ್ತು ಪಾಲಕ್ಕಾಡ್ ಆಸ್ಪತ್ರೆಗಳಿಗೆ ಅನಗತ್ಯ ಭೇಟಿ ನೀಡುವುದನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ನೀಫಾ ರೋಗದ ಲಕ್ಷಣಗಳು ಕಂಡುಬಂದಲ್ಲಿ ವರದಿ ಮಾಡುವಂತೆ ಆಸ್ಪತ್ರೆಗಳಿಗೆ ಅರೋಗ್ಯ ಇಲಾಖೆ ತಿಳಿಸಿದೆ.