ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಬಿ.ಸಿ ರೋಡಿನ ಫ್ಲೈ ಓವರ್ ಕೆಳಗೆ, ಮರಳು ಮತ್ತು ಕೆಂಪು ಕಲ್ಲುವಿನ ಕೃತಕ ಅಭಾವವನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿದೆ ಎಂದು ರಾಜ್ಯ ಸರಕಾರದ ವಿರುದ್ಧ ಜನಾಕ್ರೋಶ ಪ್ರತಿಭಟನೆಯನ್ನು ನಡೆಸಲಾಯಿತು.
ಜುಲೈ 14ರಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಇನ್ನಿತರ ಬಿಜೆಪಿ ಮುಖಂಡರು ಜೊತೆ ಸೇರಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮರಳು ಮತ್ತು ಕೆಂಪು ಕಲ್ಲುವಿನ ವ್ಯವಹಾರವನ್ನು ರಾಜ್ಯ ಸರಕಾರ ನಿಲ್ಲಿಸಿದ ಪರಿಣಾಮ ಕೆಲಸ ಕಾರ್ಮಿಕರು ಮತ್ತು ಮನೆ ಕಟ್ಟುವವರಿಗೆ ತುಂಬಾ ಪರಿಣಾಮ ಬೀರಿದೆ ಎಂದು ಬಿಜೆಪಿ ಜಿಲ್ಲೆಯಾದ್ಯಂತ ಈ ಪ್ರತಿಭಟನೆಯನ್ನು ಕೈಗೊಂಡಿತ್ತು.