26 July 2025 | Join group

ಟೆಸ್ಲಾ(TESLA) ಭಾರತದ ಪ್ರಥಮ ಶೋರೂಮ್ ಮುಂಬೈನಲ್ಲಿ ಉದ್ಘಾಟನೆ – ಇದು ಒಂದು ದೊಡ್ಡ ಮೈಲಿಗಲ್ಲು

  • 15 Jul 2025 10:42:19 AM

ಮುಂಬಯಿ: ಎಲೆಕ್ಟ್ರಿಕ್ ಕಾರು ತಯಾರಿಕಾ ಜಾಗತಿಕ ದೈತ್ಯ ಟೆಸ್ಲಾ, ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ತನ್ನ ಪ್ರಥಮ ಶೋರೂಮ್ ಅನ್ನು ಜುಲೈ 15ರಂದು ಉದ್ಘಾಟಿಸಿದೆ. ಬಾಂದ್ರಾ ಕುರ್ಳಾ ಕಾಂಪ್ಲೆಕ್ಸ್ (BKC) ಪ್ರದೇಶದಲ್ಲಿರುವ 4,000 ಚದರ ಅಡಿಯ ಶೋರೂಮ್ ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಉಪಸ್ಥಿತರಿದ್ದರು.

 

ಈ "ಟೆಸ್ಲಾ ಎಕ್ಸ್ಪೀರಿಯನ್ಸ್ ಸೆಂಟರ್" ನಲ್ಲಿ ವಾಹನ ಪ್ರದರ್ಶನ ಮತ್ತು ಟೆಸ್ಟ್ ಡ್ರೈವ್‌ ಸೌಲಭ್ಯಗಳಿದ್ದು, ಪ್ರಾರಂಭದಲ್ಲಿ Model Y ಕಾರುಗಳನ್ನು ಸೀಮಿತ ಪ್ರಮಾಣದಲ್ಲಿ ಪ್ರದರ್ಶಿಸಲಾಗುತ್ತಿದೆ. ಭಾರತದಲ್ಲಿ ಉನ್ನತ ಶುಲ್ಕದ ಕಾರಣ ಕಾರುಗಳ ದರ ₹60-70 ಲಕ್ಷಕ್ಕೆ ಏರಿದೆ.

 

ಇದು ಟೆಸ್ಲಾದ ಭಾರತದತ್ತ ಪ್ರಾರಂಭಿಕ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲೂ ಶೋರೂಮ್‌ ತೆರೆಯಲು ಕಂಪನಿ ಯೋಜಿಸುತ್ತಿದೆ.