29 July 2025 | Join group

'ನನ್ನ ಮಗಳ ಶವ ಇಲ್ಲಿಯೇ ಇದೆ, ಆದರೆ ಪೊಲೀಸರು ಭಯಪಟ್ಟಂತ್ತಿದೆ' – ಅನನ್ಯಾ ತಾಯಿಯ ಹೃದಯವಿದ್ರಾವಕ ಪತ್ರ

  • 17 Jul 2025 08:59:49 PM

ಬೆಳ್ತಂಗಡಿ, ಧರ್ಮಸ್ಥಳ: ಅನನ್ಯಾ ಭಟ್ ಕೇಸಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆಯಬೇಕಿತ್ತು. ಆದರೆ, ಶವಪತ್ತೆ ಪ್ರಕ್ರಿಯೆ ಅಂತಿಮವಾಗದೆ ಮತ್ತೊಂದು ಕುತೂಹಲ ಉಂಟುಮಾಡಿದೆ. ಶಂಕಿತ ಸ್ಥಳದಲ್ಲಿ ಶವವನ್ನು ಹೊರತೆಗೆಯಬೇಕೆಂದು ನಿರ್ಧರಿಸಲಾಗಿದ್ದರೂ, ಪೊಲೀಸರು ಘಟನಾ ಸ್ಥಳಕ್ಕೆ ಹಾಜರಾಗದೇ ಇರುವುದು ಬಹಳ ಕುತೂಹಲ ತರಿಸಿದೆ.

 

ವಕೀಲರು ಮತ್ತು ಶವ ಹೂತು ಹಾಕಿದ್ದೇನೆ ಏನು ಹೇಳಿದ್ದ ವ್ಯಕ್ತಿ ಸ್ಥಳಕ್ಕೆ ಸರಿಯಾಗಿ ತಲುಪಿದ್ದು, ಮಹಜರಿಗೂ ಸಿದ್ಧತೆಗೊಂಡಿತ್ತು. ಆದರೆ ಸುಮಾರು ಒಂದು ಗಂಟೆ ಕಾದರೂ ಪೊಲೀಸರು ಬಾರದ ಕಾರಣ ಕಾರ್ಯಾಚರಣೆ ಮುಂದೂಡಲಾಯಿತು. ಅನನ್ಯಾ ಭಟ್ ಅವರ ತಾಯಿ ಕೂಡ ಸ್ಥಳಕ್ಕೆ ಆಗಮಿಸಿದ್ದರು.

 

ವಕೀಲರಾದ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಅನನ್ಯಾ ತಾಯಿಯ ಪತ್ರವನ್ನು ಓದಿಸಿದರು. ಆ ಪತ್ರದಲ್ಲಿ ತಾಯಿ ಬರೆದಿದ್ದರು: "ನೆನ್ನೆ ನಾನು ಎಸ್‌ಪಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಇಂದು ನಡೆಯಲಿರುವ ಶವದ ಹೊರತೆಗೆಯುವಿಕೆಯಲ್ಲಿ ನನ್ನ ಮಗಳ ಶವವೇ ಸಿಗಬಹುದು ಎಂಬ ಭಾವನೆಯಿಂದ ಉಸಿರೆ ಹಿಡಿದು ಕಾಯುತ್ತಿದ್ದೆ. ಆದರೆ, ಪೊಲೀಸರು ಬರಲೇ ಇಲ್ಲ. ಶವವನ್ನು ಹೊರತೆಗೆಯಲು ಅವರಿಗೂ ಭಯವಿದೆಯೆಂದು ನನಗೆ ಅನಿಸುತ್ತದೆ. ನನ್ನ ಮಗಳ ಶವ ಇಲ್ಲಿಯೇ ಇದೆ ಎಂಬ ಮನದಾಳದ ಕಿರುಚು ಕೇಳಿಸುತ್ತಿದೆ. ಹೀಗಾಗಿ, ನಾನು ಮಾನ್ಯ ಕರ್ನಾಟಕ ಹೈಕೋರ್ಟ್ ಮತ್ತು ಸರ್ವೋಚ್ಛ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡುತ್ತೇನೆ."

 

ಇದಕ್ಕೆ ಬೆನ್ನಾಗಿ ಎಸ್‌ಪಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು: “ಆ ವ್ಯಕ್ತಿ ಶವವನ್ನು ಹೂತು ಹಾಕಿದ್ದಾನೆ ಎಂಬ ಶಂಕೆಯಿದೆ. ಶವವನ್ನು ಹೊರತೆಗೆಯುವ ನಂತರ ಆ ವ್ಯಕ್ತಿ ಓಡಿ ಹೋಗುವ ಸಾಧ್ಯತೆಯೂ ಇದೆ.” ಎಂದು ತಿಳಿಸಿದ್ದಾರೆ.

 

ಈ ಹೇಳಿಕೆಯು ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರು ಪೊಲೀಸರ ಧೈರ್ಯ ಮತ್ತು ಕರ್ತವ್ಯದ ನಿಷ್ಠೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಬೇಡಿಕೆಗಳ ನಂತರವೂ ಪೊಲೀಸರು ಶವವನ್ನು ಹೊರತೆಗೆಯಲು ಹಿಂಜರಿಯುತ್ತಿರುವುದು ಪ್ರಶ್ನಾರ್ಹವಾಗಿದೆ.