ಬೆಂಗಳೂರು: ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರು ರಾಜ್ಯ ಬಿಜೆಪಿ ಘಟಕದಲ್ಲಿ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಅವರು ಹೊಸ ಹಿಂದೂ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂಬ ಸಂದೇಶ ನೀಡಿದ್ದಾರೆ.
“ನಾನು ಮತ್ತೆ ಯಾರ ಪಕ್ಷಕ್ಕೂ ಸೇರಲ್ಲ. ಜನರ ಬೆಂಬಲ ನನಗೆ ಇದೆ. ಹೊಸ ಪಕ್ಷ ಶುರುಮಾಡಿ ಉತ್ತಮ ನಾಯಕರನ್ನು ಸೇರಿಸಿ ಮುಂದಿನ ಚುನಾವಣೆಗೆ ಎದುರಿಸುತ್ತೇನೆ,” ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಅವರು ಈ ಹೊಸ ಪಕ್ಷವು ಹಿಂದೂ ಸಮುದಾಯದ ಹಿತ ಕಾಪಾಡುವ ಗುರಿಯನ್ನು ಹೊಂದಿರುತ್ತದೆ ಎಂದೂ ತಿಳಿಸಿದ್ದಾರೆ. ಈ ಪಕ್ಷವನ್ನು ವಿಜಯದಶಮಿಯೊಳಗೆ ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ.