ಮಂಗಳೂರು: ಹೆಬ್ಬಾವು ಮರಿ ಬೇಕಾ? ಕೇವಲ 45 ಸಾವಿರ!” – ಇಂಥ ಅಕ್ರಮ ಜಾಲವೊಂದನ್ನು ಬಿಚ್ಚಿಟ್ಟಿದ್ದಾರೆ ಮಂಗಳೂರು ಅರಣ್ಯ ಇಲಾಖೆ ಮತ್ತು ಕದ್ರಿ ಪೊಲೀಸರು. ಎಂಡಿ, ಕಾಲೇಜು ಹುಡುಗ, ಪೆಟ್ ಅಂಗಡಿ ಮಾಲೀಕ ಸೇರಿ ನಾಲ್ಕು ಮಂದಿ ಯುವಕರು, ವನ್ಯಜೀವಿ ಸಾಗಣೆ ಆರೋಪದಲ್ಲಿ ಬಂಧಿತರಾಗಿದ್ದಾರೆ. ಇದರಲ್ಲಿ ಒಬ್ಬ ಅಪ್ರಾಪ್ತ ಕೂಡ ಸೇರಿದ್ದಾನೆ.
ನಕಲಿ ಖರೀದಿದಾರರ ರೂಪದಲ್ಲಿ ಬಂದ ಅರಣ್ಯ ಅಧಿಕಾರಿಗಳು, ಮಂಗಳೂರಿನ ಬಡಗ ಉಳಿಪಾಡಿಯ 18 ವರ್ಷದ ವಿಶಾಲ್ ಎಂಬ ಯುವಕ 45 ಸಾವಿರ ರೂ. ಹಣ ಕೇಳಿದ್ದ. ವ್ಯವಹಾರ ಕುದುರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಂತರ ದಾಳಿ ನಡೆಸಿ ಆತನನ್ನು ಬಂಧಿಸಿದರು.
ಈ ಸಂದರ್ಭದಲ್ಲಿ ಆತ ವಿಚಾರಣೆ ವೇಳೆ, “ಇದು ನನ್ನದಲ್ಲ, ಗೆಳೆಯನದ್ದು ” ಎಂಬ ನೆಪವಿಟ್ಟು ಕಾರಣ, ತಕ್ಷಣ ಉಪಾಯದಿಂದ ಆತನ ಅಪ್ರಾಪ್ತ ಗೆಳೆಯನನ್ನು ಮಾಲ್ ಒಂದರ ಬಳಿಗೆ ಆತನನ್ನು ಬರುವಂತೆ ಹೇಳಿ, ಅಲ್ಲಿಂದಲೇ ಬಂಧಿಸಿದ್ದಾರೆ.
ಈ ಮೂಲಕ ಹಾವು ವ್ಯವಹಾರಕ್ಕೆ ಸಂಪರ್ಕವಿತ್ತು ಎಂಬ ಶಂಕೆಯಿಂದ ಸ್ಟೇಟ್ ಬ್ಯಾಂಕ್ ಬಳಿಯ ಪೆಟ್ ಝೋನ್ ಅಂಗಡಿಗೂ ದಾಳಿ ನಡೆಸಿ, ಮಾಲಿಕ ಶಕೀಲ್ ಇಸ್ಮಾಯಿಲ್ ಹಾಗೂ ಸಿಬ್ಬಂದಿ ಮುಸ್ತಫನನ್ನೂ ಬಂಧಿಸಲಾಗಿದೆ. ಅಂಗಡಿಯಲ್ಲಿ ನಕ್ಷತ್ರ ಆಮೆಗಳೂ ಪತ್ತೆಯಾಗಿದ್ದು, ವಶಪಡಿಸಲಾಗಿದೆ.
ಅಸಲಿ ಪೈಥಾನ್ ಅಲ್ಲ… ಜನರನ್ನು ಯಾಮಾರಿಸಿದ ತಂತ್ರ:
ಆರೋಪಿಗಳು ಭಾರತದಲ್ಲಿ ಸಾಮಾನ್ಯವಾಗಿ ಸಿಗುವ ‘ಇಂಡಿಯನ್ ರಾಕ್ ಪೈಥಾನ್’ ಅನ್ನು ವಿದೇಶದ ‘ಬಾಲ್ ಪೈಥಾನ್’ ಎಂದು ಹೇಳಿ ಮಾರುತ್ತಿದ್ದರಂತೆ. ಜನರು “ಹೆಬ್ಬಾವು ಸಾಕಿದರೆ ಹಣ ಜಾಸ್ತಿ ಆಗುತ್ತೆ” ಎಂಬ ನಂಬಿಕೆಯಿಂದ ಇವುಗಳನ್ನು ಖರೀದಿಸುತ್ತಿದ್ದರಂತೆ.
ವೈಡ್ಯ ನಂಬಿಕೆ ಅಥವಾ ಅಪರಾಧ?
ಹೆಬ್ಬಾವು, ನಕ್ಷತ್ರ ಆಮೆಗಳನ್ನು ಮನೆಯಲ್ಲಿ ಸಾಕುವುದು ಕಾನೂನಿಗೆ ವಿರುದ್ಧ. ಯಾವುದೇ ಕಾರಣಕ್ಕೂ ವನ್ಯಜೀವಿಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.