26 July 2025 | Join group

ಶಿಕ್ಷಣಕ್ಕೆ ವಯಸ್ಸು ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ ಜಯಂತಿ: 52ನೇ ವಯಸ್ಸಿನಲ್ಲಿ 2ನೇ ಪಿಯುಸಿ ಪರೀಕ್ಷೆಯಲ್ಲಿ ಪಾಸ್

  • 19 Jul 2025 06:39:17 PM

ಸುಳ್ಯ: ತಾಲೂಕಿನ ಅಜ್ಜವರೆ ಗ್ರಾಮದ ಅಟ್ಲೂರು ಮೂಲದ 52 ವರ್ಷದ ಜಯಂತಿಯವರು ವಯಸ್ಸಿನ ಅಡೆತಡೆಗಳೆನ್ನದೆ ವಿದ್ಯಾಭ್ಯಾಸದತ್ತ ಹೆಜ್ಜೆ ಇಟ್ಟಿದ್ದಾರೆ. ಮಾಜಿ ಶಿಕ್ಷಕ ಅಚ್ಯುತ ಅಟ್ಲೂರವರ ಪತ್ನಿಯಾದ ಜಯಂತಿಯವರು ಈ ಹಿಂದೆ ಅಜ್ಜವರೆ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದವರು.

 

ಅವರು ಈಗ  ಕಲಾ ವಿಭಾಗದಲ್ಲಿ 307 ಅಂಕಗಳನ್ನು ಪಡೆದು 2ನೇ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಪಡೆದ ವಿಷಯವಾರು ಅಂಕಗಳು ಹೀಗಿವೆ: ಕನ್ನಡ – 57, ಇಂಗ್ಲಿಷ್ – 50, ಇತಿಹಾಸ – 55, ಅರ್ಥಶಾಸ್ತ್ರ – 51, ರಾಜಕೀಯ ಶಾಸ್ತ್ರ – 50, ಸಮಾಜಶಾಸ್ತ್ರ – 49.

 

ಶಾರದಾ ವಿದ್ಯಾಲಯ (ಸುಳ್ಯ) ಮತ್ತು ಪ್ರಗತಿ ಎಡ್ಯುಕೇಷನಲ್ ಇನ್‌ಸ್ಟಿಟ್ಯೂಟ್ (ಪುಟ್ಟೂರು) ನ ಶಿಕ್ಷಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಅವರು ಈ ಸಾಧನೆ ಸಾಧಿಸಿದ್ದಾರೆ.

 

ಜೀವಿತದಲ್ಲಿ ಶಿಕ್ಷಣದ ಮಹತ್ವವನ್ನು ತಮ್ಮ ನಡೆ ಮೂಲಕ ತೋರಿಸಿದ ಜಯಂತಿಯವರು ಇತರರಿಗೆ ಪ್ರೇರಣೆಯ ಮೂಲವಾಗಿದ್ದಾರೆ. ಏಜ್ ಇಸ್ ಜಸ್ಟ್ ಆ ನಂಬರ್ (Age is Just A Number) ಎನ್ನುವುದಕ್ಕೆ ಇವರ ಸಾಧನೆಯೇ ಒಂದು ಜೀವಂತ ಉದಾಹರಣೆ.