ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಶ್ವಾನದಳಕ್ಕೆ ಇದೀಗ ಹೊಸ ಸೇರ್ಪಡೆ ಆಗಿದೆ. ಶೋಧ ಕಾರ್ಯಗಳಲ್ಲಿ ವಿಶ್ವಾಸಾರ್ಹತೆಯನ್ನು ಹೊಂದಿರುವ ಲ್ಯಾಬ್ರಡರ್ ರಿಟ್ರೀವರ್ ತಳಿಯ ಒಂದು ಚಿಕ್ಕ ನಾಯಿ ಮರಿ ಶ್ವಾನದಳಕ್ಕೆ ಸೇರಿಸಲಾಗಿದೆ. ಈ ವಿಶೇಷ ಶ್ವಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಅವರ ನೇತೃತ್ವದಲ್ಲಿ ಶ್ವಾನದಳ ಸಿಬ್ಬಂದಿ ಹಸ್ತಾಂತರವಾಗಿ ಪಡೆದುಕೊಂಡರು.
ಲ್ಯಾಬ್ರಡರ್ ರಿಟ್ರೀವರ್ – ಶ್ರೇಷ್ಠ ಶೋಧಕ ತಳಿಯ ಶ್ವಾನ:
ಲ್ಯಾಬ್ರಡರ್ ರಿಟ್ರೀವರ್‌ಗಳು ಬುದ್ಧಿವಂತಿಕೆ, ಶಿಸ್ತಿನ ವ್ಯವಸ್ಥೆ ಹಾಗೂ ವಿಶಿಷ್ಟವಾದ ಘ್ರಾಣ ಶಕ್ತಿಯಿಂದ ಪ್ರಸಿದ್ಧವಾಗಿರುವ ಶ್ವಾನ ತಳಿ. ಇವು ಸ್ಫೋಟಕ ಪದಾರ್ಥಗಳು, ಮಾದಕವಸ್ತುಗಳು ಮತ್ತು ನಿಗೂಢ ವಸ್ತುಗಳನ್ನು ಪತ್ತೆಹಚ್ಚಲು ಖಾಸಗಿ ಹಾಗೂ ಸರ್ಕಾರಿ ಶಾಖೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿವೆ. ಸಹಕಾರದ ಮನೋಭಾವನೆ ಮತ್ತು ಶೀಘ್ರ ಅಭ್ಯಾಸ ಪಟುತ್ವದಿಂದ ಇವು ಪೋಲೀಸ್ ಇಲಾಖೆಗೆ ಅಮೂಲ್ಯ ಶಕ್ತಿಯಂತೆ ಪರಿಣಮಿಸುತ್ತವೆ.
ಈ ಹೊಸ ಸೇರ್ಪಡೆ ದಕ್ಷಿಣ ಕನ್ನಡ ಜಿಲ್ಲೆಯ ಶ್ವಾನದಳದ ಶಕ್ತಿಯನ್ನು ಮತ್ತಷ್ಟು ಬಲಪಡಿಸಲಿದೆ ಎಂಬುದು ನಿರೀಕ್ಷೆ.