ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 39/2025 ಪ್ರಕರಣಕ್ಕೆ ಹೊಸ ವಿಕಾಸಗಳು ನಡೆದಿದೆ. ಮಾನ್ಯ ಕರ್ನಾಟಕ ಸರ್ಕಾರವು ದಿನಾಂಕ 19.07.2025 ರಂದು ಈ ಸಂಬಂಧ ನಿರ್ಧಾರ ತೆಗೆದುಕೊಂಡಿದ್ದು, ಪ್ರಕರಣವನ್ನು 'ವಿಶೇಷ ತನಿಖಾ ತಂಡ (SIT)' ಗೆ ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಿದೆ.
ಪ್ರಸ್ತುತ ಪ್ರಕರಣವು ಬಹುಚರ್ಚಿತವಾಗಿದ್ದು, ಸತ್ಯಾಂಶ ಅನಾವರಣಕ್ಕೆ ತೀವ್ರ ಒತ್ತಡ ವೃದ್ಧಿಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಸಮ್ಮತ ಹಾಗೂ ಪರದರ್ಶಕ ತನಿಖೆಗಾಗಿ ಸರ್ಕಾರವು SIT ನೇಮಕ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿಶೇಷ ತಂಡವು ತನಿಖಾ ಜವಾಬ್ದಾರಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬಗಳಿಗೆ ಇದು ತುಸು ನಿಟ್ಟುಸಿರು ತಂದಂತಾಗಿದೆ.