ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಶವ ಪತ್ತೆ ಪ್ರಕರಣ ಮತ್ತು ಹತ್ಯೆ ಸಂಶಯದ ಪ್ರಕರಣ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವ ಕ್ರಮದ ವಿರುದ್ಧ ಶಾಸಕ ಗಾಲಿ ಜನಾರ್ಧನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಧರ್ಮಸ್ಥಳ ಮಂಜುನಾಥನಿಗೆ ಅಥವಾ ಅವರ ಸನ್ನಿಧಿಗೆ ತೊಂದರೆ ತರುವ ಪ್ರಯತ್ನವಾದರೆ ಈ ಸರ್ಕಾರದ ಸರ್ವನಾಶ ಖಚಿತ," ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳದಂತ ಪವಿತ್ರ ಸ್ಥಳಕ್ಕೆ ಛಾಯೆ ಬಿದ್ದರೂ ಅದು ಹಿಂದೂ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಹಿಂದೂ ನಂಬಿಕೆಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಕ್ರಮ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. "ಎಸ್‌ಐಟಿ ತನಿಖೆ ಸತ್ಯ ಕಂಡುಹಿಡಿಯಬೇಕೆಂದು ಮಾಡಬೇಕೇ ಹೊರತು, ಧರ್ಮಸ್ಥಳದ ಮಾನಹಾನಿಗೆ ಕಾರಣವಾಗಬಾರದು, ಧರ್ಮಸ್ಥಳದ ಮಾನಹಾನಿಗೆ ಕಾರಣವಾಗಬಾರದು," ಎಂದು ರೆಡ್ಡಿ ಒತ್ತಾಯಿಸಿದರು.
ರೆಡ್ಡಿ ಹೇಳಿಕೆಯಿಂದ ಹಲವಾರು ವರುಷಗಳಿಂದ ಸೌಜನ್ಯ ಪ್ರಕರಣ ಮತ್ತು ಇನ್ನಿತರ ಪ್ರಕರಣಗಳ ವಿರುದ್ಧ ಹೋರಾಡುತ್ತಿರುವ ಸಂಘ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ .