25 July 2025 | Join group

ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸು ಹಳ್ಳಕ್ಕೆ ಬಿದ್ದು ಓರ್ವ ಪ್ರಯಾಣಿಕನ ಮೃತ್ಯು

  • 21 Jul 2025 04:30:08 PM

ಅಂಕೋಲಾ: ಬೆಳಗಾವಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಅಗಸೂರಿನ ಸಮೀಪ ನಡೆದಿದೆ. ಈ ಘಟನೆ ಜುಲೈ 21ರ ಸೋಮವಾರದ ಬೆಳಗಿನ ಜಾವ ಸಂಭವಿಸಿದೆ.

 

ಬಸ್ಸಿನಲ್ಲಿದ್ದ 18 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 

ಮೃತರ ದೇಹವನ್ನು ಕ್ರೇನ್ ಮೂಲಕ ಹೊರತೆಗೆಯಲಾಯಿತು ಮತ್ತು ಅವರು ಮಂಗಳೂರು ಮೂಲದವರಾಗಿಲ್ಲ ಎಂದು ತಿಳಿದುಬಂದಿದೆ.