ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎಂಬ ಪ್ರಕರಣ ಸಂಬಂಧ ಸುದ್ದಿಗಳ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವಿವಿಧ ದಾರ್ಮಿಕ ಮತ್ತು ರಾಜಕೀಯ ಚರ್ಚೆಗಳ ನಡುವೆ, ಅವರು ಧರ್ಮಸ್ಥಳದಲ್ಲಿ ಯಾವುದೇ ತಪ್ಪು ಸಂಭವಿಸಿಲ್ಲ ಎಂದು ತೀವ್ರವಾಗಿ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ಅವರು ಹೇಳಿದರು, “ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆದಿಲ್ಲ. ವಿಶೇಷ ತನಿಖಾ ತಂಡ (SIT) ತನಿಖೆ ಮಾಡಬೇಕು ಎಂದರೆ ಮಾಡಲಿ. ನಾವು ಈ ತನಿಖೆಗೆ ವಿರುದ್ಧವಲ್ಲ. ಯಾವಾಗಲೂ ನ್ಯಾಯ ಪ್ರಕ್ರಿಯೆಗೆ ಬಲ ನೀಡಬೇಕು. ತನಿಖೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಮಗೆ ಏನೂ ತೊಂದರೆ ಇಲ್ಲ.” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ರಾಜ್ಯ ಸರಕಾರ ನೇಮಿಸಿದ SIT ತಂಡ ರಚನೆಯಾದ ನಂತರ ಧರ್ಮಸ್ಥಳ ಪ್ರಕರಣಗಳು ಬಹಳ ರಾಜಕೀಯ ತಿರುವನ್ನು ಪಡೆದುಕೊಂಡಿದೆ.