23 July 2025 | Join group

8,842 ಆನ್‌ಲೈನ್ ಲಿಂಕ್‌ಗಳನ್ನು ತಕ್ಷಣ ತೆಗೆದುಹಾಕಲು ಆಜ್ಞೆ ಹೊರಡಿಸಿದ ನ್ಯಾಯಾಲಯ: ಧರ್ಮಸ್ಥಳ ಪ್ರಕರಣದಲ್ಲಿ ತಾತ್ಕಾಲಿಕ ತಡೆ!

  • 22 Jul 2025 09:05:29 PM

ಬೆಂಗಳೂರು: ಧರ್ಮಸ್ಥಳ ಸಂಬಂಧಿತ ಎಫ್‌ಐಆರ್‌ನಲ್ಲಿ ಯಾವುದೇ ನೇರವಾಗಿ ಕುಟುಂಬದ ಸದಸ್ಯರ ವಿರುದ್ಧ ಆರೋಪಗಳಿಲ್ಲದಿದ್ದರೂ, ಪ್ರತಿವಾದಿಗಳು ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿರುವುದರಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳ ಮಾನಮರ್ಯಾದೆಗೆ ಭಾರಿ ಧಕ್ಕಿಯಾಗುತ್ತಿದೆ ಎಂದು ಅರ್ಜಿದಾರ ಡಿ. ಹರ್ಷೇಂದ್ರ ಕುಮಾರ್ ಅವರು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು.

 

ಅವರು ಸಲ್ಲಿಸಿದ ಅರ್ಜಿಯಲ್ಲಿ, ಸುಮಾರು 75,000 ಜನರಿಗೆ ಉದ್ಯೋಗ ಹಾಗೂ 45,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಈ ರೀತಿಯ ಆರೋಪಗಳು ನಂಬಿಕೆಗೆ ಧಕ್ಕಿಯಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಧರ್ಮಸ್ಥಳ ಸಂಸ್ಥೆಗಳ ಸಕಾರಾತ್ಮಕ ಕೊಡುಗೆಗಳ ಬೆನ್ನಲ್ಲೇ ವ್ಯಕ್ತಿಗತ ಸ್ವಾರ್ಥಕ್ಕಾಗಿ ಕೆಲವರು ಜನಸಾಮಾನ್ಯರಲ್ಲಿ ತಪ್ಪು ಸುದ್ದಿ ಎಬ್ಬಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

 

ಈ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು, ತಾತ್ಕಾಲಿಕ ತಡೆಯಾಜ್ಞೆ ವಿಧಿಸುವ ಮೂಲಕ ಸ್ಪಷ್ಟ ಸೂಚನೆ ನೀಡಿದ್ದಾರೆ. 8,842 ಆನ್‌ಲೈನ್ ಲಿಂಕ್‌ಗಳನ್ನು ತಕ್ಷಣ ತೆಗೆದುಹಾಕಲು, ಮತ್ತು ಯಾವುದೇ ಮಾಧ್ಯಮಗಳಲ್ಲಿ ಸಂಬಂಧಿತ ವಿಷಯವನ್ನು ಪ್ರಕಟಿಸಬಾರದು, ಹಂಚಬಾರದು, ಅಪ್‌ಲೋಡ್ ಅಥವಾ ಪ್ರಸಾರ ಮಾಡಬಾರದು ಎಂಬಂತೆ ಆಜ್ಞೆ ನೀಡಿದ್ದಾರೆ.

 

ಈ ತಡೆ ಆದೇಶವು ಯುಟ್ಯೂಬ್ ಚಾನೆಲ್‌ಗಳು, ಸಾಮಾಜಿಕ ಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಸೇರಿದಂತೆ ಎಲ್ಲವನ್ನೂ ಒಳಗೊಂಡಿದ್ದು, ಮೇಲ್ಮನವಿ ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಲಾಗಿದೆ.