26 July 2025 | Join group

ಭಾರತದ ಮುಂದಿನ ಉಪರಾಷ್ಟ್ರಪತಿ ಬಿಜೆಪಿ ಮೂಲದವರೇ? ಪಕ್ಷದ ನಾಯಕರಿಂದ ಸೂಚನೆ

  • 24 Jul 2025 05:44:27 PM

ನವದೆಹಲಿ: ಭಾರತದ ಮುಂದಿನ ಉಪರಾಷ್ಟ್ರಪತಿ ಬಿಜೆಪಿ ಪಕ್ಷದವರೇ ಆಗಲಿದ್ದಾರೆ ಎಂದು ತಿಳಿದುಬಂದಿದೆ. ತುಂಬಾ ಅನುಭವಿ ಹಿರಿಯ ಬಿಜೆಪಿ ಮುಖಂಡರೊಬ್ಬರು ಭಾರತದ ಮುಂದಿನ ಉಪರಾಷ್ಟ್ರಪತಿ ಆಗಲಿದ್ದಾರೆ ಎಂದು ಬಿಜೆಪಿಯ ಮುಖಂಡರೊಬ್ಬರು ರಾಷ್ಟ್ರೀಯ ಮಾಧ್ಯಮಗಳಿಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

 

ಈ ಹಿಂದೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಗದೀಪ್ ಧಂಕರ್ ತೊರೆದಿದ್ದ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ ಎಂಬ ಊಹಾಪೋಹಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆದರೆ ಬಿಜೆಪಿ ಮೂಲಗಳ ಪ್ರಕಾರ, ಬಿಜೆಪಿಯ ಸಿದ್ಧಾಂತಗಳನ್ನು ಬಹಳ ಹತ್ತಿರದಿಂದ ಅನುಸರಿಸುವವರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಹೇಳಲಾಗಿದೆ.

 

ಈ ಹಿಂದೆ ಜನತಾ ದಳ ಯುನೈಟೆಡ್ ಮುಖಂಡರುಗಳು ಮತ್ತು ಯೂನಿಯನ್ ಮಿನಿಸ್ಟರ್ ರಾಮ್ ಠಾಕೂರ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಜೊತೆ ನಡೆದ ಮೀಟಿಂಗ್ ಆಧರಿಸಿ, ಮುಂದಿನ ದಿನಗಳಲ್ಲಿ ಜೆಡಿಯು ಪಕ್ಷದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪರಾಷ್ಟ್ರಪತಿ ಆಗಲಿದ್ದಾರೆ ಎಂಬ ಸಂಶಯಗಳು ವ್ಯಕ್ತವಾಗಿದ್ದವು.

 

ಈಗಾಗಲೇ ಭಾರತೀಯ ಚುನಾವಣಾ ಸಮಿತಿ ಉಪರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆಯನ್ನು ಆರಂಭಿಸಿದ್ದು ಉಪರಾಷ್ಟ್ರಪತಿ ಚುನಾವಣಾ ದಿನಾಂಕವನ್ನು ಎಲ್ಲಾ ವ್ಯವಸ್ಥೆಗಳನ್ನು ಮುಗಿಸಿದ ನಂತರ ಘೋಷಿಸಲಾಗುವುದು ಎಂದು ತಿಳಿಸಿದೆ.

 

ಈ ಮಧ್ಯೆ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋಹನ್ ಭಗತ್ ಭಾಗವತ್ ಅವರ ದಿಡೀರ್ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.