ಬೆಳ್ತಂಗಡಿ: ಠಾಣೆಯಲ್ಲಿ ಎಸ್ಐಟಿ ಅಧಿಕಾರಿಗಳು ಕೇಸ್ ಫೈಲ್ ಮಾಡಿದ ನಂತರ ಇಂದಿನಿಂದ ತನಿಖೆಯ ಪ್ರಕ್ರಿಯೆ ಶುರುವಾಗಲಿದೆ ಎಂದು ತಿಳಿದು ಬಂದಿದೆ.
ತಾನು ನೂರಾರು ಶವ ಹೂತು ಹಾಕಿದ್ದೇನೆ ಎಂದು ಪಶ್ಚಾತಾಪದಿಂದ ಪತ್ರ ಬರೆದ ಅನಾಮಧೇಯ ವ್ಯಕ್ತಿಯನ್ನು ಇಂದು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಆರಂಭಿಸಲಿದ್ದಾರೆ ಎನ್ನಲಾಗಿದೆ.
ಕೋರ್ಟಿಗೆ ಇಂದೇ ಮನವಿ ಸಲ್ಲಿಸಿ, ಅನಾಮಿಕ ವ್ಯಕ್ತಿಯನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಿದ್ದಾರೆ.
ಕಳೆದ ಕೆಲ ದಿನಗಳಿಂದ ಸುದ್ದಿ ಮಾಡುತ್ತಿರುವ ಧರ್ಮಸ್ಥಳ ಪ್ರಕರಣ ರಾಜ್ಯ ಸರಕಾರದ ಎಸ್ಐಟಿ ರಚನೆಯ ನಂತರ ತ್ವರಿತಗತಿಯಲ್ಲಿ ಸಾಗುವ ಭರವಸೆಯನ್ನು ಸಾರ್ವಜನಿಕರು ಇಟ್ಟುಕೊಂಡಿದ್ದಾರೆ.