ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಹತ್ತನೇ ತರಗತಿಯ ಪಾಸ್ ಮಾರ್ಕ್ಸ್ ಕಡಿಮೆ ಮಾಡುವ ಮೂಲಕ ಹೊಸ ನಿರ್ಧಾರಕ್ಕೆ ಬಂದಿದೆ. ಇಷ್ಟು ವರ್ಷಗಳ ಕಾಲ 35 ಅಂಕಗಳು ಪಡೆದು ಉತ್ತೀರ್ಣರಾಗುತ್ತಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಹತ್ತನೇ ತರಗತಿಯಲ್ಲಿ ಕೇವಲ 30 ಅಂಕಗಳು ಪಡೆದರೆ ಉತ್ತೀರ್ಣರಾಗಲಿದ್ದಾರೆ.
ಇದರ ಜೊತೆಗೆ ಈ ಹಿಂದೆ ಒಟ್ಟು ಪಾಸ್‌ಮಾರ್ಕ್ಸ್ ಶೇಕಡಾ 35% ಆಗಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳು 33% ಅಂಕಗಳು ಪಡೆದರೆ ಸಾಕಾಗುತ್ತದೆ.ಶಾಲೆಯ ಅಡ್ಮಿಶನ್ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪೋಷಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಈ ರೀತಿಯ ಬದಲಾವಣೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಅತೀವ ಪ್ರಭಾವ ಬೀರುತ್ತದೆ ಎಂದಿದ್ದಾರೆ. ಬಡ ಮಕ್ಕಳ ಹಾಗೂ ಸರಕಾರಿ ಶಾಲೆಗಳ ಮಕ್ಕಳಿಗೆ ಇದು ದೊಡ್ಡ ನಷ್ಟವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
SSLC ಪಾಸ್ ಮಾಡಿದ ನಂತರ ಮುಂದೇನು ಮಾಡುತ್ತಾರೆ ಎಂದು ಪ್ರಶ್ನೆ ಕೇಳಲಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಮಟ್ಟಿಗೆ ತಯಾರಾಗಲು ಸಾಧ್ಯ ಎಂದು ಆಕ್ರೋಶ ವ್ಯಕ್ತವಾಗಿದೆ.