ಮಂಗಳೂರು: ಧರ್ಮಸ್ಥಳ ಪ್ರಕರಣವನ್ನು ತನಿಖೆ ನಡೆಸಲು ರಾಜ್ಯ ಸರಕಾರ ನೇಮಿಸಿದ ಎಸ್ಐಟಿ ತಂಡ ನಿನ್ನೆ(ಜುಲೈ 25) ಸಂಜೆ ಮಂಗಳೂರಿಗೆ ಬಂದಿಳಿದ ನಂತರ ಚುರುಕಿನ ತನಿಖಾ ಕಾರ್ಯಗಳು ನಡೆಯುತ್ತಿದೆ. ನಿನ್ನೆ ಸಂಜೆಯೇ ಎಸ್ಐಟಿ ಅಧಿಕಾರಿಗಳು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಇಂದು ಜುಲೈ 26 ರಂದು, ತಾನು ನೂರಾರು ಶವವನ್ನು ಹೂತಿದ್ದೇನೆ ಎಂದು ಪತ್ರ ಬರೆದಿದ್ದ ವ್ಯಕ್ತಿಯನ್ನು ಮಂಗಳೂರಿನ ಮಲ್ಲಿಕಟ್ಟೆಯ ಐಬಿ ನಲ್ಲಿ ಎಸ್ಐಟಿ ತಂಡಕ್ಕೆ ಮೀಸಲಾಗಿದ್ದ ಕೊಠಡಿಗಳಿಗೆ ಅವನನ್ನು ಕರೆಸಿ ತನಿಖೆ ನಡೆಸಿದ್ದಾರೆ. ವಕೀಲರ ಜೊತೆ ಎಸ್ಐಟಿ ಕಚೇರಿಗೆ ಭೇಟಿಯಾಗಿದ್ದಾರೆ.
ಬಿರುಸಿನಿಂದ ಸಾಗುತ್ತಿರುವ ತನಿಖಾ ಪ್ರಕ್ರಿಯೆ, ಧರ್ಮಸ್ಥಳ ಪರಿಸರದಲ್ಲಿ ನಡೆದಿರುವ ಹಲವಾರು ನಿಗೂಢ ಪ್ರಕರಣಗಳಿಗೆ ನ್ಯಾಯ ದೊರೆಕಿಸಿಕೊಡುವಲ್ಲಿ 5 ಪ್ರಮುಖ ಅಧಿಕಾರಿಗಳ ನೇತೃತ್ವದ ಎಸ್ಐಟಿ ತಂಡ ಶ್ರಮವಹಿಸಲಿದ್ದು, ರಾಜ್ಯ ಪೊಲೀಸ್ ಕಮಿಷನರ್ ಆದೇಶದ ಮೇರೆಗೆ 20 ಹೆಚ್ಚಿನ ಅಧಿಕಾರಿಗಳನ್ನು ಕೂಡ ಈ ತಂಡಕ್ಕೆ ಸೇರ್ಪಡಿಸಲಾಗಿದೆ.