01 August 2025 | Join group

ಮಂಗಳೂರಿನಲ್ಲಿ ಎಸ್‌ಐಟಿಯ ಪ್ರತ್ಯೇಕ ಕಚೇರಿ: ಸಂಪರ್ಕಿಸಲು ದೂರವಾಣಿ ಮತ್ತು ಇನ್ನಿತರ ವಿವರಗಳು ಲಭ್ಯ

  • 31 Jul 2025 10:00:34 AM

ಧರ್ಮಸ್ಥಳ: ಪ್ರಸ್ತುತ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣದ ಸಮಗ್ರ ತನಿಖೆ ನಡೆಸಲು, ಎಸ್‌ಐಟಿ ಮಂಗಳೂರಿನಲ್ಲಿ ಪ್ರತ್ಯೇಕ ಕಚೇರಿಯನ್ನು ರಚಿಸಿದೆ.

 

ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಸೆಕ್ಷನ್ 311(ಎ) ಅಡಿಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 39/2025 ಸಂಬಂಧಿಸಿದ ಅಪರಾಧ ಪ್ರಕರಣವನ್ನು ತನಿಖೆ ನಡೆಸುವ ಸಲುವಾಗಿ ಮಂಗಳೂರಿನಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕೃತ ಕಚೇರಿಯನ್ನು ಸ್ಥಾಪಿಸಿದೆ.

 

ಈ ಪ್ರಕರಣದ ಬಗ್ಗೆ ಎಸ್ಐಟಿ ಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು, ಈ ಕೆಳಗಿನ ವಿಳಾಸ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

 

ಕಚೇರಿ ವಿಳಾಸ,

ನಿರೀಕ್ಷಣಾ ಮಂದಿರ

ಮಲ್ಲಿಕಟ್ಟೆ, ಕದ್ರಿ

ಮಂಗಳೂರು ನಗರ, ದ.ಕ ಜಿಲ್ಲೆ

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

 

ದೂರವಾಣಿ ಸಂಖ್ಯೆ: 0824-2005301

ಮೊಬೈಲ್ ಸಂಖ್ಯೆ: 8277986369

ವಾಟ್ಸಾಪ್ ಸಂಖ್ಯೆ: 8277986369

ಈ-ಮೇಲ್ ವಿಳಾಸ: sitdps@ksp.gov.in

 

ಈ ಮೇಲಿನ ಸಂಪರ್ಕ ವಿವರಗಳಿಗೆ ಸಂಪರ್ಕಿಸುವ ಮೂಲಕ ಮಾಹಿತಿ ನೀಡಬಹುದಾಗಿದೆ.