ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯವು ಮಹತ್ತರ ತೀರ್ಪನ್ನು ಹೊರಹಾಕಿದೆ. ಈ ಆರೋಪದಲ್ಲಿ ಭಾಗಿಯಾಗಿದ್ದರು ಎನ್ನುವ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ವಿಶೇಷವೆಂದರೆ, ಈ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಮತ್ತು ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ರವರ ಹೆಸರು ಸೇರಿತ್ತು. 17 ವರ್ಷಗಳ ನಂತರ ನ್ಯಾಯಾಲಯ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಇಂದು ಜುಲೈ 31 ರಂದು ಎಲ್ಲರಿಗೂ ಕ್ಲೀನ್ ಚಿಟ್ ನೀಡಿದೆ.
2008 ರ ಸೆಪ್ಟೆಂಬರ್ 29 ರಂದು ರಾತ್ರಿ ಮುಂಬೈಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್‌ನ ಭಿಕ್ಕು ಚೌಕ್ ಬಳಿ ರಾತ್ರಿ ಸ್ಫೋಟ ಸಂಭವಿಸಿತ್ತು. ಎನ್ಐಎಗೆ ವಹಿಸಿಲಾಗಿದ್ದ ಈ ಪ್ರಕರಣದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ, ಇಂದು ಪ್ರಕರಣದಲ್ಲಿನ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಆದ್ದರಿಂದ ಕೇವಲ ಅನುಮಾನದ ಆಧಾರದಲ್ಲಿ ಶಿಕ್ಷೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಸ್ಫೋಟದಲ್ಲಿ ಬಳಸಲಾದ ಮೋಟಾರ್ ಸೈಕಲ್ ಪ್ರಜ್ಞಾ ಠಾಕೂರ್ ಅವರದ್ದೇ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಧೀಶ ಲಹೋಟಿ ತಿಳಿಸಿದ್ದಾರೆ. ನೀಡಿರುವ ಎಂಜಿನ್ ಸಂಖ್ಯೆ ಕೂಡ ಸ್ಪಷ್ಟವಾಗಿಲ್ಲ ಮತ್ತು ಚಾಸಿಸ್ ಸಂಖ್ಯೆ ಅಳಿಸಿಹೋಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳೆಂದು ಕೆಳಗಿನ ಏಳು ವ್ಯಕ್ತಿಗಳ ಮೇಲೆ ಆರೋಪಿಸಲಾಗಿತ್ತು,
ಭೋಪಾಲ್‌ನ ಮಾಜಿ ಬಿಜೆಪಿ ಸಂಸದ - ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್,
ಮಾಜಿ ಲೆಫ್ಟಿನೆಂಟ್ ಕರ್ನಲ್ - ಪ್ರಸಾದ್ ಶ್ರೀಕಾಂತ್ ಪುರೋಹಿತ್
ನಿವೃತ ಮೇಜರ್ - ಉಪಾಧ್ಯಾಯ
ಅಜಯ್ ರಹಿರ್ಕರ್
ಸುಧಾಕರ್ ದ್ವಿವೇದಿ
ಸುಧಾಕರ್ ಚತುರ್ವೇದಿ
ಸಮೀರ್ ಕುಲಕರ್ಣಿ
ಇಂದು ನ್ಯಾಯಾಲಯವು ಎಲ್ಲಾ 6 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ.