01 August 2025 | Join group

ಮಂಗಳೂರು ನಗರದ ಕಂಕನಾಡಿಯಲ್ಲಿ ಗಾಂಜಾ ವ್ಯಸನಿಯೊಬ್ಬನ ಅವಾಂತರ: ಪೊಲೀಸರಿಂದ ಬಂಧನ

  • 31 Jul 2025 04:20:01 PM

ಮಂಗಳೂರು: ಮಾದಕ ವಸ್ತುಗಳ ಗ್ರಾಹಕರನ್ನು ತಗ್ಗಿಸಲು ನಗರದಾದ್ಯಂತ ಸಾಕಷ್ಟು ಜಾಗೃತಿ ಅಭಿಯಾನಗಳು ನಡೆಯುತ್ತಿವೆ, ಆದರೆ ನಗರದಲ್ಲಿ ಮಾದಕ ವಸ್ತುಗಳ ಮಾರಾಟಗಾರರು ಅಥವಾ ಗ್ರಾಹಕರಿಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ.

 

ಇದೀಗ ಮಂಗಳೂರಿನ ಹೃದಯ ಭಾಗದ ಕಂಕನಾಡಿಯಲ್ಲಿ ವ್ಯಕ್ತಿಯೊಬ್ಬ ಗಾಂಜಾ ಸೇವನೆ ನಡೆಸಿ ರಿಕ್ಷಾ ಪಾರ್ಕ್ ನಲ್ಲಿ ಪ್ರಯಾಣಿಕರಿಗೆ ಮತ್ತು ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿದ್ದ ಸಂದರ್ಭದಲ್ಲಿ ಕಂಕನಾಡಿ ಗ್ರಾಮಾಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

ಅಧಿಕೃತವಾಗಿ ದೂರು ದಾಖಲೆಯ ಮೇರೆಗೆ ಪೊಲೀಸರು ತಕ್ಷಣ ಕಾರ್ಯಚರಣೆ ನಡೆಸಿ ಮಹೇಶ್ ಸಾಲಿಯಾನ್(35) ಎಂಬ ವ್ಯಕ್ತಿಯನ್ನು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.