ಬಂಟ್ವಾಳ: ತಾಲೂಕಿನ ಕಡೇಶಿವಾಲಯದ ಕೊರತಿಗುರಿ ನಿವಾಸಿ ಹೇಮತ್ ಆಚಾರ್ಯ(21) ಎಂಬಾತನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಈತನ ಮೃತದೇಹ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ಪತ್ತೆಯಾಗಿದೆ.
ಜುಲೈ 27 ರಂದು ನಾಪತ್ತೆಯಾಗಿದ್ದ ಹೇಮಂತ್, 28 ರಂದು ಬಂಟ್ವಾಳ ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಲಾಗಿತ್ತು. ನಂತರ ಈತನ ಬೈಕ್ ಮತ್ತು ಮೊಬೈಲ್ ಬಂಟ್ವಾಳದ ಜಕ್ರಿಬೆಟ್ಟು ಡ್ಯಾಮ್ ಬಳಿ ಸಿಕ್ಕಿದ ನಂತರ ನೇತ್ರಾವತಿ ನದಿಗೆ ಹಾರಿರಬಹುದೆಂದು ಅಗ್ನಿಶಕಾಮಕ ದಳ ಮತ್ತು ಮುಳುಗು ತಜ್ಞರು ಕಾರ್ಯಾಚರಣೆಗೆ ಇಳಿದ್ದಿದರು.
ಯಾವುದೇ ಸುಳಿವು ಸಿಕ್ಕದೆ ಇದ್ದ ಕಾರಣ, ಇಂದು ಈಶ್ವರ್ ಮಲ್ಪೆ ತಂಡ ಕರೆಸಿ ಶೋಧ ಕಾಯಾಚರಣೆ ನಡೆಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಇಂದು ಸಂಜೆ ವೇಳೆಗೆ ಡ್ರೋನ್ ತರಿಸಿ ನೇತ್ರಾವತಿ ನದಿಯುದ್ದಕ್ಕೂ ಶೋಧ ನಡೆಸಿ ಕೊನೆಗೆ ನದಿ ಮಧ್ಯೆ ಇದ್ದ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಡ್ರೋನ್ ಮೂಲಕ ಕಾರ್ಯಾಚರಣೆಗೆ ಸಹಕರಿಸಿದ ಜಿ.ವಿ ಫ್ರೆಂಡ್ಸ್ ಕಡೇಶಿವಾಲಯ ತಂಡಕ್ಕೆ ಸಾರ್ವಜನಿಕರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಹೇಮಂತ್ ನ ಈ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ಪೊಲೀಸ್ ನಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.