ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಕೋರ್ಟ್ ಇಂದು ಘೋಷಿಸಿದೆ. ನ್ಯಾಯಾಧೀಶರ ತೀರ್ಪು ಹೊರಬರುತ್ತಿದ್ದಂತೆ, ಪ್ರಜ್ವಲ್ ಕಣ್ಣೀರಿಟ್ಟು ಹೊರ ನಡೆದಿದ್ದಾರೆ.ಕಳೆದ ವರ್ಷ ಜೂನ್ ತಿಂಗಳಲ್ಲಿ, ಪ್ರಜ್ವಲ್ ರೇವಣ್ಣನ ವಿರುದ್ಧ ಹಲವಾರು ಮಹಿಳೆಯರು ಲೈಂಗಿಕ ಶೋಷಣೆಯ ಆರೋಪಗಳೊಂದಿಗೆ ಬೃಹತ್ ಪ್ರಮಾಣದ ವಿಡಿಯೋ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಹಂಚಿಕೊಂಡಿದ್ದರು.
ಈ ನಡುವೆ ಪೊಲೀಸ್ ತನಿಖೆ, ಪಾಸ್ಪೋರ್ಟ್ ರದ್ದುಪಡಿಸುವುದು, ಬ್ಲೂ ಕಾರ್ನರ್ ನೋಟಿಸ್, ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್, ಹಾಗೂ ಜರ್ಮನಿಯಿಂದ ವಾಪಸಿ— ಈ ಎಲ್ಲಾ ಕ್ರಮಗಳ ಬಳಿಕ ಪೊಲೀಸರು ಪ್ರಜ್ವಲ್ ಅವರನ್ನು ಬಂಧಿಸಿದ್ದರು.ಇದೀಗ ಆಗಸ್ಟ್ 1ರಂದು ಕರ್ನಾಟಕದ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರನ್ನು ಆರೋಪಿಯಾಗಿದ್ದಾರೆಂದು ತೀರ್ಪು ನೀಡಿದೆ.
ನಾಳೆ ಆಗಸ್ಟ್ 2ರಂದು ಶಿಕ್ಷೆ ಪ್ರಕಟಣೆಯಾಗಲಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರಡಿಯಲ್ಲಿ ಅತ್ಯಾಚಾರ ಆರೋಪ ಗಂಭೀರವಾದ್ದು, ಈ ಪ್ರಕರಣದಲ್ಲಿ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ. ಒಟ್ಟು ನಾಲ್ಕು ಪ್ರಕರಣಗಳು ಬಾಕಿಯಿರುವುದರಿಂದ, ಇದು ಪ್ರಥಮ ತೀರ್ಪು. ಹಿರಿಯ ವಕೀಲರ ಅಭಿಪ್ರಾಯದಂತೆ, ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯ ಸಾಧ್ಯತೆ ಹೆಚ್ಚು ಇದೆ.