ಮಂಗಳೂರು: ಆನ್‌ಲೈನ್ ವ್ಯವಹಾರಗಳ ಹೆಸರಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇತ್ತೀಚೆಗಷ್ಟೆ ಮಂಗಳೂರಿನ ವ್ಯಕ್ತಿಯೊಬ್ಬರು ರೂ. 22.59 ಲಕ್ಷ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ವಂಚಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ನಕಲಿ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದಾರೆ. ಆ ವಿಡಿಯೋದಲ್ಲಿ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಅವತ್ತು ನೀಡಿದ ಭಾಷಣವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿರುತ್ತಾರೆ.
ಆ ವೀಕ್ಷಕರಲ್ಲಿ ಒಬ್ಬರಾದ ಮಂಗಳೂರಿನ ಈ ವ್ಯಕ್ತಿ, ವಿಡಿಯೋದಲ್ಲಿ ನೀಡಲಾಗಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿ ತನ್ನ ಹೆಸರು ಹಾಗೂ ಮೊಬೈಲ್ ನಂಯನ್ನು ನೀಡಿದ ನಂತರ, ವಂಚಕರ ಒತ್ತಡದಿಂದ ₹1.50 ಲಕ್ಷ ಹಣವನ್ನು ವರ್ಗಾಯಿಸಿದ್ದಾರೆ. ನಂತರ ‘ಥಾಮಸ್ ಜಾರ್ಜ್’ ಎಂಬಾತ ಕರೆಮಾಡಿ ₹2.32 ಲಕ್ಷ ಹಣ ಬೇಡಿದ್ದಾರೆ.
ಹೀಗೆ, ಜೆಟ್ಟಿಂಗ್ ನವ್ಯಾ, ಅಬ್ದುಲ್ ಅಜೀಜ್, ಚಂದ್ರಶೇಖರ್ ಎಂಬ ಬೇರೆ ಬೇರೆ ಹೆಸರಿನಲ್ಲಿ ಕರೆಮಾಡುತ್ತಾ ಒಟ್ಟು ₹22,59,613 ಮೊತ್ತ ವಂಚಕರು ಕಿತ್ತುಕೊಂಡಿರುವುದು ದೂರುದಾರರು ಹೇಳಿದ್ದಾರೆ. ಅಂತಿಮವಾಗಿ ಶಂಕೆ ಹುಟ್ಟಿದ ವ್ಯಕ್ತಿ ಎಚ್ಚೆತ್ತುಕೊಂಡಾಗಲೆಲ್ಲಾ ಬಹುಮೊತ್ತದ ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.