06 August 2025 | Join group

ವಿಟ್ಲದಲ್ಲಿ ಖಾಸಗಿ ಬಸ್ ಕೆಎಸ್‌ಆರ್‌ಟಿಸಿ ಕಾಂಪೌಂಡ್ ಗೆ ಡಿಕ್ಕಿ, 10 ಜನರಿಗೆ ಗಾಯ

  • 04 Aug 2025 09:24:52 AM

ವಿಟ್ಲ: ಖಾಸಗಿ ಬಸ್ಸೊಂದು ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಕಾಂಪೌಂಡ್ ಗೆ ಡಿಕ್ಕಿ ಹೊಡದ ಪರಿಣಾಮ ಸುಮಾರು 10 ಪ್ರಯಾಣಿಕರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.

 

ಕಲ್ಲಡ್ಕ ಮತ್ತು ಕಾಞಂಗಾಡ್ ನಡುವೆ ಅಂತರರಾಜ್ಯ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಬಸ್, ಕನ್ಯಾನದಿಂದ ವಿಟ್ಲ ಕಡೆ ಚಲಿಸುತ್ತಿದ್ದ ವೇಳೆ, ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ದುರಂತ ಸಂಭವಿಸಿದೆ.

 

ಈ ಡಿಕ್ಕಿಯಿಂದಾಗಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ತಕ್ಷಣ ವಿಟ್ಲ ಸರಕಾರಿ ಆಸ್ಪತ್ರೆಗೆ ತಕ್ಷಣ ಸೇರಿಸಿ ಚಿಕಿತ್ಸೆ ನೀಡಲಾಯಿತು. ಡ್ರೈವರ್ ಮತ್ತು ಕಂಡಕ್ಟರ್ ಕೂಡ ಗಾಯಗೊಂಡಿದ್ದಾರೆ.

 

ಭಾರತೀಯ ನ್ಯಾಯಸಂಹಿತೆಯ ಅಡಿಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಮುಂದಿನ ತನಿಖೆ ನಡೆಸುತ್ತಿದ್ದಾರೆ.