ಬೆಂಗಳೂರು: ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ಕೈದಿ ಸಂಖ್ಯೆ 15528 ನೀಡಲಾಗಿದೆ.
ಕಳೆದ ಒಂದು ವರ್ಷ ನಾಲ್ಕು ತಿಂಗಳ ನಿರಂತರ ತನಿಖೆಯ ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಸೆರೆವಾಸ ಶಿಕ್ಷೆ ನೀಡಿದೆ.
ಭಾನುವಾರ ಬೆಳಿಗ್ಗೆ ಜೈಲಿ ಅಧಿಕಾರಿಗಳು ಜೈಲಿನ ನಿಯಮಾನುಸಾರವಾಗಿ ಬಿಳಿ ಸಮವಸ್ತ್ರ ಮತ್ತು ಸಜಾಕೈದಿ ಸಂಖ್ಯೆ ನೀಡಿದ್ದು, ಇನ್ನು ಮುಂದೆ ಮಾಜಿ ಪ್ರಧಾನಿಯವರ ಮೊಮ್ಮಗ ಅಪರಾಧಿ ಪ್ರಜ್ವಲ್, ಜೈಲಿನ ಒಳಗಡೆ ಜೈಲು ಅಧಿಕಾರಿಗಳ ನಿರ್ದೇಶನದಂತೆ ಜೀವನ ಕಳೆಯಬೇಕು.
ಜನಪ್ರಧಿನಿಗಳ ಕೋರ್ಟಿನಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಮೊದಲ ಜನಪ್ರತಿನಿಧಿಯಾಗಿದ್ದಾರೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ. ಒಂದು ವೇಳೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, 14 ವರ್ಷಗಳ ಕಾಲ ಮಾತ್ರ ಜೈಲಿನಲ್ಲಿ ಇರಬೇಕಾಗಿತ್ತು ಆದರೆ ಜೀವನ ಪರ್ಯಂತ ಶಿಕ್ಷೆ ನೀಡುದರಿಂದ, ಉಸಿರು ಇರುವವರೆಗೆ ಪ್ರಜ್ವಲ್ ಜೈಲಿನಲ್ಲೇ ಜೀವನ ಕಳೆಯಬೇಕಾಗುತ್ತದೆ.