ಮಂಗಳೂರು: ನಗರದಲ್ಲಿ ಟಿಂಟ್ ಗಾಜು ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಮಂಗಳೂರು ನಗರ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ವಾಹನಗಳಿಗೆ ಟಿಂಟ್ ಗಾಜು ಅಳವಡಿಸಿ ಚಲಾಯಿಸುತ್ತಿದ್ದವರನ್ನು ಸಂಚಾರ ಪೂರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಠಾಣೆಗೆ ಕರೆಸಿ, ಗಾಜು ತೆಗೆಯಿಸಿ ಮುಂದೆಗೆ ಇಂತಹ ಉಲ್ಲಂಘನೆ ಆಗದಂತೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಸಂಚಾರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ IMV ಕಾಯ್ದೆಯ ಅಡಿಯಲ್ಲಿ ದಂಡ ವಸೂಲಿಸಲು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ತಮ್ಮ ರಿಪೋರ್ಟ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.