31 August 2025 | Join group

ತಲಪಾಡಿ ಟೋಲ್‌ಗೇಟ್ ಬಳಿ ಭೀಕರ ಅಪಘಾತ – ಮಗು ಸೇರಿ ಐವರು ಸಾವು, ಇಬ್ಬರಿಗೆ ಗಾಯ

  • 28 Aug 2025 10:29:19 PM

ಮಂಗಳೂರು: ತಲಪಾಡಿ ಟೋಲ್‌ಗೇಟ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಗು ಸೇರಿ ಐವರು ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರ ಗಾಯಗೊಂಡಿದ್ದಾರೆ.

ಸರಕಾರಿ ಬಸ್ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಬಂದು, ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

 

ಮೃತರಲ್ಲಿ -

ಹೈದರ್ (47), ಆಟೋ ಡ್ರೈವರ್, ಸ/o ಪೊಡಿಯಬ್ಬ, ಮುಳ್ಳುಗುಡ್ಡೆ, ಅಜ್ಜಿನಡ್ಕ, ಕೋಟೆಕಾರ್

ಅವಮ್ಮಾ (72), ವಿ/o ಅಬ್ದುಲ್ ಖಾದರ್, ಫರಂಗಿಪೇಟೆ, ಬಿ.ಸಿ.ರಸ್ತೆ

ಖದೀಜಾ (60), ಡಿ/o ಮೊಯ್ದೀನ್ ಕುಂಜಿ, ಅಜ್ಜಿನಡ್ಕ, ಕೋಟೆಕಾರ್

ಹಸ್ನಾ (11), ಡಿ/o ಸುಬಾಹುಲ್ ಹಮೀದ್, ಅಜ್ಜಿನಡ್ಕ, ಕೋಟೆಕಾರ್

ನಫೀಸಾ (52), ವಿ/o ಮೊಹಮ್ಮದ್, ಅಜ್ಜುಬಡ್ಕ, ಕೋಟೆಕಾರ್

ಆಯಿಷಾ ಫಿದಾ (19), ಡಿ/o ಮೊಹಮ್ಮದ್, ಅಜ್ಜಿನಡ್ಕ, ಕೋಟೆಕಾರ್ ಸೇರಿದ್ದಾರೆ.

 

ಗಾಯಗೊಂಡವರು –

ಲಕ್ಷ್ಮಿ (61), ಪೆರುಂಬಳ, ಕಾಸರಗೋಡು

ಸುರೇಂದ್ರ (39), ಎಸ್/o ಲಕ್ಷ್ಮಿ, ಪೆರುಂಬಳ, ಕಾಸರಗೋಡು.

 

ಅಪಘಾತದ ಬಳಿಕ ಕರ್ನಾಟಕ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಯು.ಟಿ. ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ತಿಳಿಸಿದರು.