16 September 2025 | Join group

ಅತ್ಯಾಚಾರ ಸತ್ಯ, ಆದರೆ ಇಲ್ಲಿಗೆ ಮುಗಿಸೋಣ’ ಎಂದಿದ್ದಾರೆ – ಸೌಜನ್ಯ ತಾಯಿ ಕುಸುಮಾವತಿಯ ಸ್ಪೋಟಕ ಹೇಳಿಕೆಗೆ ಬಿಜೆಪಿ ತತ್ತರ!

  • 03 Sep 2025 03:54:22 PM

ಬೆಳ್ತಂಗಡಿ: ರಾಜ್ಯ ಬಿಜೆಪಿ ಆಯೋಜಿಸಿದ್ದ “ಧರ್ಮಸ್ಥಳ ಚಲೋ” ಕಾರ್ಯಕ್ರಮದ ಬಳಿಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತಮ್ಮ ಪಕ್ಷದ ಇತರ ನಾಯಕರುಗಳೊಂದಿಗೆ ಸೌಜನ್ಯಳ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದರು.

 

ಈ ಸಂದರ್ಭದಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡುತ್ತಾ, “ಸೌಜನ್ಯ ಘಟನೆ ನಡೆದ ನಂತರ, ನಮ್ಮ ಮನೆಯ ಹಿರಿಯರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಅತ್ಯಾಚಾರ ನಮ್ಮ ಮನೆಯಿಂದ ಆಗಿದ್ದು ಸತ್ಯ; ನಮಗೆ ಅನ್ಯಾಯವಾಗಿದೆ. ಆದರೆ, ಈ ವಿಷಯವನ್ನು ಇಲ್ಲಿಯೇ ಮುಗಿಸೋಣ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ ಎನ್ನುವ ಮಾತನ್ನು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

 

“ಈ ಪರಿಸ್ಥಿತಿಯಲ್ಲಿ ನಮಗೆ ನ್ಯಾಯ ಒದಗಿಸಬಲ್ಲವರು ಯಾರು?” ಎಂಬ ಪ್ರಶ್ನೆಯನ್ನು ಬಿಜೆಪಿ ಮುಖಂಡರಿಗೆ ಮುಂದೆ ಇಟ್ಟಿದ್ದಾರೆ.