16 September 2025 | Join group

ಮೋದಿ ಸರ್ಕಾರದ GST 2.0: ಜನಸಾಮಾನ್ಯರಿಗೆ ದೀಪಾವಳಿ ಉಡುಗೊರೆ, ಅಗ್ಗವಾಗಲಿದೆ ದೈನಂದಿನ ವಸ್ತುಗಳು

  • 04 Sep 2025 10:23:53 AM

ದೆಹಲಿ: ಮೋದಿ ನೇತೃತ್ವದ ಬಿಜೆಪಿ ಸರಕಾರವು ಭಾರತದ ಜನರ ಜೀವನವನ್ನು ಸುಗಮಗೊಳಿಸಲು ಹಾಗೂ ಆತ್ಮನಿರ್ಭರ ಭಾರತ ನಿರ್ಮಿಸುವ ಉದ್ದೇಶದೊಂದಿಗೆ ಮಹತ್ವದ GST ಸುಧಾರಣೆಗಳನ್ನು ತಂದಿದೆ. ಇದನ್ನು ಕೇಂದ್ರ ಸರಕಾರವು ದೇಶದ ಜನತೆಗೆ ನೀಡಿರುವ ದೀಪಾವಳಿ ಉಡುಗೊರೆ ಎಂದು ಪರಿಗಣಿಸಲಾಗಿದೆ.


2025ರ “Next-Generation GST” (GST–2.0) ಸುಧಾರಣೆಗಳ ಪ್ರಕಾರ ಖರ್ಚು ಕಡಿಮೆ ಮಾಡುವುದು, ಸೌಕರ್ಯ ಹೆಚ್ಚಿಸುವುದು, ಮತ್ತು ಮಧ್ಯಮ ವರ್ಗ, MSMEs, ಮಹಿಳೆಯರು ಹಾಗೂ ಯುವಕರ ಹಿತಾಸಕ್ತಿ ಕಾಯ್ದುಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.


ರೈತರಿಂದ ಉದ್ಯಮಗಳವರೆಗೆ, ಮನೆಗಳಿಂದ ವ್ಯವಹಾರಗಳವರೆಗೆ ಮುಂದಿನ ಪೀಳಿಗೆಯ GST ಈಗಾಗಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಸೆಪ್ಟೆಂಬರ್ 22ರಿಂದ ಈ ಹೊಸ ದರಗಳು ಜಾರಿಯಾಗಲಿವೆ.

ಅಗ್ಗವಾಗುವ ವಸ್ತುಗಳು
ಹಲ್ಲುಮಂಜನ, ಶ್ಯಾಂಪು, ಟೂತ್‌ಪೇಸ್ಟ್, ಸೋಪ್‌ಗಳು ಸೇರಿದಂತೆ ದೈನಂದಿನ ಉಪಯೋಗ ವಸ್ತುಗಳು – 18% → 5%
ಪ್ಯಾಕೇಜ್ಡ್ ಆಹಾರ ಪದಾರ್ಥಗಳು, ನೂಡಲ್ಸ್, ಬಿಸ್ಕಿಟ್, ಬಟರ್, ಗೀ ಮುಂತಾದವು – 18% → 5%
ರೊಟ್ಟಿ, ಚಪಾತಿ, ಪರೋಟಾ, ಪನೀರ್, ಹಾಲು – 0% (GST ರಹಿತ)
ಜೀವ ರಕ್ಷಕ ಔಷಧಿಗಳು – ಸಂಪೂರ್ಣ ತೆರಿಗೆ ಮುಕ್ತ
ಎಲೆಕ್ಟ್ರಾನಿಕ್ಸ್‌ ವಸ್ತುಗಳು (ಟಿವಿ, ಎಸಿ, ಡಿಶ್‌ವಾಷರ್), ಸಣ್ಣ ಕಾರುಗಳು, ಬೈಕ್‌ಗಳು (≤350cc), ಸಿಮೆಂಟ್ – 28% → 18%

 

ಹೆಚ್ಚಾಗುವ ವಸ್ತುಗಳು
ಪಾನ್‌ಮಸಾಲಾ, ಗುಟ್ಕಾ, ಸಿಗರೇಟು, ಏರೇಟೆಡ್ ಡ್ರಿಂಕ್ಸ್, ಲಕ್ಸುರಿ ಕಾರುಗಳು, ದೊಡ್ಡ ಬೈಕ್‌ಗಳು, ಖಾಸಗಿ ವಿಮಾನ, ಯಾಟ್‌ಗಳು – 40% GST


ಅದೇ ದರದಲ್ಲಿ ಮುಂದುವರಿಯುವವು

ವಿದ್ಯುತ್ ವಾಹನಗಳು – 5% GST ಮುಂದುವರಿಯಲಿದೆ.

 

ಒಟ್ಟಿನಲ್ಲಿ, ಸಾಮಾನ್ಯ ಬಳಕೆದಾರರಿಗೆ ನೆರವು,  ಐಶಾರಾಮಿ ವಸ್ತುಗಳಿಗೆ ಕಟ್ಟುನಿಟ್ಟಿನ ತೆರಿಗೆ ಎಂಬುದೇ ಹೊಸ GST ಸುಧಾರಣೆಗಳ ಮುಖ್ಯ ಸಂದೇಶವಾಗಿದೆ.