ತೆಲಂಗಾಣದ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ಕುಡಿದು ತೂರಾಡುತ್ತ ಬಂದು ತಾನು ಕುಳಿತುಕೊಳ್ಳುವ ಮೇಜಿನ ಅಡಿಯಲ್ಲಿ ಮಲಗಿದ ಘಟನೆ ನಡೆದಿದೆ.
“ಗುರುವಿನ ಸ್ಥಾನ ದೇವರಿಗಿಂತ ಮೇಲು” ಎಂದು ಕರೆಯುವಂತಿದ್ದರೂ, ವಿದ್ಯೆ ಕಲಿಸುವ ಶಿಕ್ಷಕನ ಅವಾಂತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಹಳ ವೈರಲ್ ಆಗಿದೆ.
ಈ ಘಟನೆ ತೆಲಂಗಾಣದ ಜೈನೂರ್ ಮಂಡಲದ ಸುಕುತ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ಜೆ. ವಿಲಾಸ್ ಕಂಠಪೂರ್ತಿ ಕುಡಿದು ಶಾಲೆಗೆ ಬಂದಿದ್ದು, ಮತ್ತಿನ ಅಮಲಿನಲ್ಲಿ ನಿಲ್ಲಲಾಗದೆ ಮೇಜಿನ ಕೆಳಗೆ ತೂರಿಕೊಂಡು ಮಲಗಿದ್ದಾನೆ.
ಈ ವಿಷಯ ಬೆಳಕಿಗೆ ಬಂದ ತಕ್ಷಣ ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ವಿಲಾಸ್‌ನ್ನು ಕೆಲಸದಿಂದ ವಜಾಗೊಳಿಸಿದೆ. ವಿದ್ಯೆ ಕಲಿಸುವ ಶಿಕ್ಷಕರನ್ನು ದೇವರಿಗೆ ಹೋಲಿಸುವ ಜನರು, ಈ ಶಿಕ್ಷಕನ ನಡೆ ನೋಡಿ ಬೆರಗಾಗಿದ್ದಾರೆ.