ಬಂಟ್ವಾಳ: ಬಿ.ಸಿ. ರೋಡಿನ ಹೃದಯ ಭಾಗದಲ್ಲಿರುವ ರೈಲ್ವೆ ಫ್ಲೈಓವರ್ ರಸ್ತೆಯ ಮೇಲೆ ಅಗಲವಾದ ಹೊಂಡಗಳು ಉಂಟಾಗಿದ್ದು, ವಾಹನ ಚಾಲಕರು ಭೀತಿಯಿಂದ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಪ್ಪಿನಂಗಡಿ ಮಾರ್ಗವಾಗಿ ಬಿ.ಸಿ. ರೋಡ್ ತಲುಪುತ್ತಿದ್ದಂತೆಯೇ, ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ದಾಟಿದ ಕೂಡಲೇ ಹೊಂಡಗಳಿಂದ ತುಂಬಿದ ರಸ್ತೆಗಳು ಗಮನ ಸೆಳೆಯುತ್ತವೆ.
ಹಾಗೆಯೇ, ಬಿ.ಸಿ. ರೋಡ್ ಬಸ್ ನಿಲ್ದಾಣದ ಎದುರು ಪ್ಯಾಚ್ ವರ್ಕ್ ಮಾಡಿದ ಭಾಗದಲ್ಲಿಯೂ ಮತ್ತೆ ಹೊಂಡಗಳು ಕಾಣಿಸಿಕೊಂಡಿವೆ.
ಹೆದ್ದಾರಿ ರಸ್ತೆ ನಿರ್ಮಾಣ ಸಂಬಂಧಿತ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು, ಆದಷ್ಟು ಬೇಗ ರಸ್ತೆ ಸರಿಪಡಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.