16 September 2025 | Join group

ಪೆರ್ನೆ ಕಡಂಬು ಗೋ ಹತ್ಯೆ ಪ್ರಕರಣ: ಸಂಘಟನೆಗಳ ನಾಯಕರು ಬಾಧಿತ ಮನೆಗೆ ಭೇಟಿ – 24 ಗಂಟೆಯೊಳಗೆ ಬಂಧನ ಬೇಡಿಕೆ

  • 05 Sep 2025 04:03:06 PM

ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಪೆರ್ನೆ ಕಡಂಬು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಇರುವ ದೇಜಪ್ಪ ಮೂಲ್ಯರ ಹಟ್ಟಿಯ ಗೇಟನ್ನು ಮುರಿದು ಗೋವನ್ನು ಕದ್ದು ಅವರ ಜಾಗದಲ್ಲೇ ಅಮಾನುಷವಾಗಿ ಕಡಿದು, ಮಾಂಸ ಮಾಡಿ, ತ್ಯಾಜ್ಯವನ್ನು ಅಲ್ಲೇ ಎಸೆದು ಹೋಗಿರುವ ಅಮಾನವೀಯ ಘಟನೆ ನಡೆದಿದ್ದು, ಈ ವಿಚಾರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ‌.

 

ಗೋ ಸಾಕಾಣೆಯನ್ನೇ ಆಧಾರವಾಗಿಟ್ಟುಕೊಂಡು‌ ಬದುಕುತ್ತಿದ್ದ ಕುಟುಂಬವು ಈ ಘಟನೆಯಿಂದ ತೀವ್ರ ನೊಂದಿದ್ದು, ಅವರ ಮನೆಗೆ ಪರಿವಾರ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಅವರಿಗೆ ನೈತಿಕ ಸ್ಥೈರ್ಯ ತುಂಬಿದರು‌.

 

ಸರಕಾರ ಹಾಗೂ ಪೋಲೀಸ್ ಇಲಾಖೆಯ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿ.ಜೆ.ಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿರುವ ದಯಾನಂದ ಶೆಟ್ಟಿ ಉಜಿರೆಮಾರು ಇವರು 'ಉದ್ದೇಶಪೂರ್ವಕವಾಗಿ ಹಿಂದುಗಳ ಭಾವನೆಗೆ ದಕ್ಕೆ ತಂದು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಇಂತಹ ಶಕ್ತಿಗಳನ್ನು ಸರಕಾರ ಹಾಗು ಪೋಲೀಸ್ ಇಲಾಖೆ ನಿಯಂತ್ರಿಸುವಲ್ಲಿ ವಿಫಲವಾಗಿದೆ‌, 24 ಗಂಟೆಯ ಒಳಗಾಗಿ ನೈಜ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಶನಿವಾರ ಬೃಹತ್ ಹೋರಾಟ ನಡೆಸುವ ಎಚ್ಚರಿಕೆಯನ್ನಿತ್ತರು.

 

ಈ ಸಂಧರ್ಭದಲ್ಲಿ ಪ್ರಮುಖರಾದ ಹರಿಪ್ರಸಾದ್ ಯಾದವ್, ಬಿ.ಜೆ.ಪಿ ಯುವಮೋರ್ಚಾ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್ ಕಡೇಶಿವಾಲಯ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ, ಜಜರಂಗದಳ ಜಿಲ್ಲಾ ಪ್ರಮುಖರಾದ ಪ್ರವೀಣ್ ಕಲ್ಲೇಗ, ಕಲ್ಲಡ್ಕ ಪ್ರಖಂಡ ಸಂಯೋಜಕರಾದ ಅಮಿತ್ ಅಂಚನ್ ಕಲ್ಲಡ್ಕ, ಪೆರ್ನೆ ಗ್ರಾಮ ಪಂಚಾತಯ್ ಸದಸ್ಯರುಗಳು‌, ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.