ವಾಷಿಂಗ್ಟನ್: ಮನಸಿಗೆ ಬಂದಂತೆ ತೆರಿಗೆ ಸುಂಕ ಹೇರಿಸಿ ತನ್ನ ದರ್ಪವನ್ನು ತೋರಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈಗ ಕೆಟ್ಟ ನಂತರ ಬುದ್ಧಿ ಬಂದಂತಾಗಿದೆ.
ತಾನು ಹೇಳಿದ್ದೇ ಅಂತಿಮ ಎಂದು ಮೆರೆಯುತ್ತಿದ್ದ ಟ್ರಂಪ್, ಭಾರತ–ರಷ್ಯಾ–ಚೀನಾ ಬಾಂಧವ್ಯ ನೋಡಿ ಉರಿದುಕೊಂಡಂತೆ ತೋರುತ್ತಿದೆ. ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಭಾರತವು ಅಮೆರಿಕದಿಂದ ದೂರವಾಗಿರುವುದು ದುಃಖದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಜೊತೆಗೆ ರಷ್ಯಾವನ್ನೂ ಕಳೆದುಕೊಂಡಿರುವುದು ದುರ್ಘಟನೆಯಾಗಿದೆ ಎಂದು ಹೇಳಿದ್ದಾರೆ. ಟ್ರಂಪ್ ತಮ್ಮ ‘ಟ್ರುತ್’ ಎನ್ನುವ ಸೋಶಿಯಲ್ ಮೀಡಿಯಾದಲ್ಲಿ ಮೋದಿ, ಜಿನ್‌ಪಿಂಗ್ ಮತ್ತು ಪುಟಿನ್ ಒಟ್ಟಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿ, “ಈ ಎರಡು ದೇಶಗಳು ಕುತಂತ್ರ ಬುದ್ಧಿಯ ಚಿನ್ನಕ್ಕೆ ಹತ್ತಿರವಾಗಿವೆ. ಈ ಮೂರು ದೇಶಗಳ ಸ್ನೇಹ ದೀರ್ಘಕಾಲ ಉಳಿಯಲಿ” ಎಂದು ಬರೆದಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ SCO ಸಭೆಯಲ್ಲಿ ಈ ಮೂರು ದೇಶಗಳ ನಾಯಕರು ಒಟ್ಟಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿ, ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದರು