ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಇಂದು ನಡೆದ ಧರ್ಮ ಜಾಗೃತಿ ಸಮಾವೇಶದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿದರು.
“ಜ್ವರ ಬಂದ ಕಾರಣ ನಿಶಕ್ತಿ ಇತ್ತು, ಆದರೆ ಇಲ್ಲಿ ಸೇರಿರುವವರ ನಗು ನೋಡಿ ನಾನು ಎಲ್ಲವನ್ನು ಮರೆತೇ,” ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದುಡಿದ ಮೂಡಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವರನ್ನು ಅವರು ಕೊಂಡಾಡಿದರು.
“ನಾನು ಧರ್ಮಸ್ಥಳ ದೇವಸ್ಥಾನದ ಪಟ್ಟಾಭಿಷೇಕ ಆದ ದಿನದಿಂದ ಹಲವು ಕಷ್ಟಗಳನ್ನು ಎದುರಿಸುತ್ತ ಬಂದಿದ್ದೇನೆ. ನನ್ನ ಪಟ್ಟಾಭಿಷೇಕ ದಿನವೇ ಇಲ್ಲಿ ಪ್ರತಿಭಟನೆ ನಡೆದಿತ್ತು. ಆ ಎಲ್ಲಾ ಸನ್ನಿವೇಶಗಳು ನನ್ನನ್ನು ಇನ್ನಷ್ಟು ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ನೀಡಿವೆ,” ಎಂದು ಹೆಗ್ಗಡೆ ಹೇಳಿದರು.
ಕೊನೆಯದಾಗಿ ಅವರು, “ಅಣ್ಣಪ್ಪನ ಶಕ್ತಿ ಏನು ಎಂಬುದು 4 ತಿಂಗಳಲ್ಲೇ ಗೊತ್ತಾಗಿದೆ. ಅಣ್ಣಪ್ಪನ ರಕ್ಷಣೆ ಇದ್ದರೆ ಬೇರೆ ಯಾರ ರಕ್ಷಣೆಯೂ ಅಗತ್ಯವಿಲ್ಲ. ಕ್ಷೇತ್ರಕ್ಕೆ ಆಪತ್ತು ದೂರವಾಗಲಿ ಎಂದು ಪ್ರಾರ್ಥಿಸೋಣ, ಕ್ಷೇತ್ರದ ಶಕ್ತಿಗಳು ಎಲ್ಲರಿಗೂ ಬೆಂಬಲ ನೀಡಲಿ,” ಎಂದು ಹೇಳಿದರು.