ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿವಾಸಿ ಕುಸುಮಾವತಿ ಅವರು ತಮ್ಮ ಹಾಗೂ ತಮ್ಮ ಮಗಳು ಸೌಜನ್ಯ ವಿರುದ್ಧ ಅಶ್ಲೀಲ ಮತ್ತು ಮಾನಹಾನಿಕರ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ 13 ಖಾತೆಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಸುಮಾವತಿ ಅವರು ತಮ್ಮ ಸಹೋದರ ಪುರಂದರ ಗೌಡ ಅವರ ಮೊಬೈಲ್‌ನಲ್ಲಿ ಈ ಬರಹಗಳನ್ನು ಗಮನಿಸಿದ್ದು, 2024ರ ಆಗಸ್ಟ್ 1ರಿಂದ 2025ರ ಸೆಪ್ಟೆಂಬರ್ 3ರವರೆಗಿನ ಅವಧಿಯಲ್ಲಿ ಈ ಘಟನೆಗಳು ನಿರಂತರವಾಗಿ ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಶ್ಲೀಲ ಹಾಗೂ ಮಾನಹಾನಿಕರ ಬರಹ ಪ್ರಕಟಿಸಿರುವ ಆರೋಪದ ಮೇಲೆ ದೂರು ದಾಖಲಿಸಲ್ಪಟ್ಟಿರುವ ಖಾತೆಗಳು: ಶುಭಾ ರೈ, ಯಶವಂತ ಗಟ್ಟಿ ಕೊಕ್ಕಡ, ದೀಪಕ್ ಶೆಟ್ಟಿ ಬೆಂಗಳೂರು, ಸರಸ್ವತಿ ಅಮಿತ್ ಬಜ್ಪೆ, ಅಮಿತ್ ಬಜ್ಪೆ, ಅನು ಶೆಟ್ಟಿ, ನವೀನ್ ಗೌಡ, ಜೈ ಕುಂಜ್ಞಪ್ಪ, ವೈ. ಎಂ. ಅಡ್ಮಿನ್, ಟ್ರೋಲ್ ಬಾಹುಬಲಿ, ರಾಜೇಶ್ ನಾಯ್, ಟ್ರೋಲ್ ತಿಮ್ಮರೌಡಿ (Instagram), ಶೆಟ್ಟಿ ತನುಷ್.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 79 ಮತ್ತು 296ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.