ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಅಂಗವಾಗಿ ಕೇಂದ್ರ ಸರಕಾರವು ವೈದ್ಯಕೀಯ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಕಡಿತಗೊಳಿಸಿರುವ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರ ನೇರ ಪ್ರಯೋಜನ ದೇಶದ ಜನತೆಯ ಜೊತೆಗೆ ಬಂಟ್ವಾಳದ ಜನತೆಗೆ ಕೂಡ ದೊರಕಲಿದೆ.
ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಎಕ್ಸ್‌ರೇ ಫಿಲ್ಮ್, ರೋಗನಿರ್ಣಯ ಕಿಟ್‌ಗಳು ಮತ್ತು ರೋಗ ನಿರೋಧಕಗಳ ವೆಚ್ಚ ಈಗ ಹಳೆಯದಕ್ಕಿಂತ ಕಡಿಮೆ ಆಗಲಿದೆ.
ಮೊದಲು ಎಕ್ಸ್‌ರೇ ಫಿಲ್ಮ್ ಮೇಲೆ 25 ಶೇಕಡಾ ತೆರಿಗೆ ವಿಧಿಸಲಾಗುತ್ತಿತ್ತು, ಆದರೆ ಇದೀಗ ಕೇವಲ 5 ಶೇಕಡಾ ಮಾತ್ರ. ಇದೇ ರೀತಿ ರೋಗನಿರ್ಣಯ ಕಿಟ್‌ಗಳು ಮತ್ತು ರೋಗ ನಿರೋಧಕಗಳ ತೆರಿಗೆ ದರವು 16 ಶೇಕಡದಿಂದ 5 ಶೇಕಡಕ್ಕೆ ಇಳಿಕೆಗೊಂಡಿದೆ.
ಅಷ್ಟೇ ಅಲ್ಲದೆ, ಜೀವ ರಕ್ಷಕ 33 ವಿಧದ ಔಷಧಿಗಳ ಮೇಲೆ ಸಂಪೂರ್ಣವಾಗಿ ಶೂನ್ಯ ಜಿಎಸ್ಟಿ (Zero GST) ಜಾರಿಯಾಗಲಿದ್ದು, ಬಂಟ್ವಾಳದ ಸಾಮಾನ್ಯ ಜನತೆಗೆ ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆ ಪಡೆಯುವವರಿಗೆ ನೇರ ಉಪಯೋಗವಾಗಲಿದೆ.
ಈ ಸುಧಾರಣೆಗಳು 22ರ ಸೆಪ್ಟೆಂಬರ್ 2025 ತಿಂಗಳಿಂದ ಜಾರಿಯಾಗಲಿವೆ. ಈ ಬದಲಾವಣೆಗಳಿಂದ ಬಂಟ್ವಾಳದ ರೋಗಿಗಳಿಗೆ ಚಿಕಿತ್ಸೆ ವೆಚ್ಚದಲ್ಲಿ ನೇರ ಉಳಿತಾಯವಾಗಲ್ಲಿದ್ದು, ಸಾಮಾನ್ಯ ಜನರಿಗೆ ಆರೋಗ್ಯ ಸೌಲಭ್ಯ ಸುಲಭವಾಗಿ ದೊರೆಯಲಿದೆ. ಕಡಿಮೆ ವೆಚ್ಚದಲ್ಲಿ ತಪಾಸಣೆ ಹಾಗೂ ಲಸಿಕೆ ಸಿಗುವುದರಿಂದ ಮುಂಚಿತ ರೋಗನಿರ್ಣಯ ಸಾಧ್ಯವಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನಿರೀಕ್ಷೆಯಿದೆ.