16 September 2025 | Join group

ಸೆಪ್ಟೆಂಬರ್ 8ರ ಹವಾಮಾನ: ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಕಡಿಮೆಯ ಸೂಚನೆ – ಇನ್ನೂ ಒಂದು ವಾರ ದೊಡ್ಡ ಮಳೆ ಸಾಧ್ಯತೆ ಕಡಿಮೆ

  • 08 Sep 2025 12:35:53 PM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: Sudhavani Weather Desk

 

ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ನಿನ್ನೆ ಮಳೆ ಕಡಿಮೆ ಆಗಿತ್ತು.  ಅಲ್ಲಲ್ಲಿ ಸಾಮಾನ್ಯ ಮಳೆಯಾಗಿದೆ.  ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದ್ದು ಉ. ಒಳನಾಡು ಬಹುತೇಕ ಮಳೆ ಕಡಿಮೆ ಆಗಿದೆ.

 

ಇವತ್ತಿನ ಮುನ್ಸೂಚನೆ ಪ್ರಕಾರ  ಕಾಸರಗೋಡು ದ.ಕ. ಜಿಲ್ಲೆಗಳಲ್ಲಿ ಮೋಡ- ಬಿಸಿಲಿನ ವಾತಾವರಣ ಇರಲಿದ್ದು   ಮಧ್ಯಾಹ್ನ ಮತ್ತು ನಾಳೆ ಮುಂಜಾನೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು.  ಉಡುಪಿ ಉ.ಕ ಜಿಲ್ಲೆಗಳಲ್ಲಿಯೂ ಮಳೆ ಕಡಿಮೆ ಆಗುತ್ತಿದೆ. ಘಟ್ಟಪ್ರದೇಶಗಳ ಸಮೀಪ ಸಂಜೆಯ ನಂತರ  ಸಣ್ಣ ಮಳೆಯಾಗಬಹುದು.  ಲೋ ಪ್ರೆಶರ್ ಪ್ರಭಾವ ಕಡಿಮೆ ಆದಂತೆ ಕರಾವಳಿಯಲ್ಲಿ ಮಳೆ ಕಡಿಮೆ ಆಗಿದ್ದು  ಇನ್ನೊಂದು ವಾರ  ದೊಡ್ಡ ಮಳೆಯ ಮುನ್ಸೂಚನೆ ಇಲ್ಲ.  ಸೀಮಿತ ಪ್ರದೇಶದಲ್ಲಿ ಮಾತ್ರ ಸಣ್ಣ ಮಳೆ ಯಾಗಬಹುದು.

 

ಮಲೆನಾಡಿನಲ್ಲಿಯೂ ಮಳೆ ಕಡಿಮೆ ಆಗುತ್ತಿದೆ.ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ  ಭಾಗಷಃ ಮೋಡದ ವಾತಾವರಣ ಇರಲಿದ್ದು  ಕೆಲವೆಡೆ ಸಣ್ಣ ಮಳೆಯಾಗಬಹುದು. ಹಾಸನ ಜಿಲ್ಲೆಯ ಕೆಲವೆಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಇನ್ನು ಒಂದು ವಾರ ಮಳೆ ಕಡಿಮೆ ಆಗುವ ಮುನ್ಸೂಚನೆ ಇದೆ.

 

ದಕ್ಷಿಣ ಒಳನಾಡಿನ ಚಾಮರಾಜನಗರ ಮೈಸೂರು ಮಂಡ್ಯ ಬೆಂಗಳೂರು - ಗ್ರಾಮಾಂತರ ತುಮಕೂರು ರಾಮನಗರ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ ಮಳೆ ಮುನ್ಸೂಚನೆ ಇದೆ.  ಕೋಲಾರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು. ಸೆಪ್ಟೆಂಬರ್ 11 ತನಕ ಮೈಸೂರು ಭಾಗದಲ್ಲಿ ಅಲ್ಲಲ್ಲಿ ಮಳೆ ಮುಂದುವರೆಯಬಹುದು.

 

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಬಿಜಾಪುರ ಬೀದರ್ ಜಿಲ್ಲೆಗಳ  ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉ. ಒಳನಾಡಿನ ಮುಂದಿನ 2-3 ದಿನ  ಮಳೆ ಕಡಿಮೆ ಆಗಬಹುದು.

 

ಗುಜರಾತ್ ರಾಜ್ಯದಲ್ಲಿರುವ ಲೋ ಪ್ರೆಷರ್ ಸೆ 7 ಕ್ಕೆ ರಾಜಸ್ಥಾನ ಗಡಿಭಾಗದಲ್ಲಿ ಚಲಿಸಿ ಪಾಕಿಸ್ತಾನದತ್ತ ಚಲಿಸಬಹುದು.  ಪಶ್ಚಿಮ ಕರಾವಳಿ ಜಿಲ್ಲೆಗಳಲ್ಲಿ  ಸೆ 15 ತನಕ ಮಳೆ ಕಡಿಮೆ ಆಗಬಹುದು.  ತಮಿಳುನಾಡು ಮತ್ತು ಈಶಾನ್ಯ ಭಾರತದಲ್ಲಿ ಗುಡುಗು ಮಳೆ ಆರಂಭವಾಗಲಿದೆ.