ಬಂಟ್ವಾಳ: ಈ ಹಿಂದೆ ಬಂಟ್ವಾಳ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ಅರ್ಚನಾ ಭಟ್ ಅವರ ವರ್ಗಾವಣೆಯ ಬಳಿಕ ತೆರವಾಗಿದ್ದ ಹುದ್ದೆಗೆ ಈಗ ನೂತನ ತಹಶೀಲ್ದಾರ್ ನೇಮಕಗೊಂಡಿದ್ದಾರೆ.
ಕನಕಪುರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಅವರು ಬಂಟ್ವಾಳ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇವರು ಮೊದಲು ಬೆಂಗಳೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಂತರ ಸುಳ್ಯದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಕನಕಪುರಕ್ಕೆ ವರ್ಗಾವಣೆಗೊಂಡಿದ್ದ ಇವರನ್ನು ಇದೀಗ ಸರ್ಕಾರದ ಆದೇಶದಂತೆ ಬಂಟ್ವಾಳಕ್ಕೆ ವರ್ಗಾವಣೆ ಮಾಡಲಾಗಿದ್ದು, ತಿಂಗಳ ಬಳಿಕ ಅಧಿಕೃತವಾಗಿ ಉಸ್ತುವಾರಿ ಸ್ವೀಕರಿಸಿದ್ದಾರೆ.