ಬಂಟ್ವಾಳ: ಬಿ.ಸಿ. ರೋಡಿನ ಯುವ ನ್ಯಾಯವಾಧಿ ಭಾರತಿ ರೈ (46) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರು ವಕೀಲರ ಸಂಘದ ಸದಸ್ಯೆಯಾಗಿದ್ದ ಇವರು ಬಿ.ಸಿ. ರೋಡಿನಲ್ಲಿ ಸ್ವಂತ ಕಚೇರಿ ಹೊಂದಿದ್ದು, ಮಂಗಳೂರು ಹಾಗೂ ಬಿ.ಸಿ. ರೋಡಿನಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು.
ಮಾಣಿ ಸಮೀಪದ ಪೆರ್ನೆ ನಿವಾಸಿ ವಸಂತ್ ರಾಜ್ ಅವರ ಪತ್ನಿಯಾಗಿದ್ದ ಭಾರತಿ ಅವರು, ಪುತ್ರ ಅತೀತ್ ರೈ, ಪುತ್ರಿ ಆಶ್ನಿ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.